ಕೇಂದ್ರ ಬಜೆಟ್‌ 2024: ಆಹಾರ, ಗೊಬ್ಬರ ಸಬ್ಸಿಡಿ ಪ್ರಮಾಣ ಕೊಂಚ ಇಳಿಕೆ

| Published : Feb 02 2024, 01:00 AM IST / Updated: Feb 02 2024, 08:26 AM IST

Full union budget in july 2024
ಕೇಂದ್ರ ಬಜೆಟ್‌ 2024: ಆಹಾರ, ಗೊಬ್ಬರ ಸಬ್ಸಿಡಿ ಪ್ರಮಾಣ ಕೊಂಚ ಇಳಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆಹಾರ ಹಾಗೂ ಗೊಬ್ಬರ ಮೇಲೆ ನೀಡುವ ಸಹಾಯಧನದ ಪ್ರಮಾಣವನ್ನು ಕೊಂಚ ಇಳಿಕೆ ಮಾಡಿದೆ. 

ಈ ಬಾರಿಯ ಚುನಾವಣಾ ಪೂರ್ವದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಬರುವ ಹಣಕಾಸು ವರ್ಷಕ್ಕೆ ಆಹಾರ ಹಾಗೂ ಗೊಬ್ಬರ ಮೇಲೆ ನೀಡುವ ಸಹಾಯಧನದ ಪ್ರಮಾಣವನ್ನು ಕೊಂಚ ಇಳಿಕೆ ಮಾಡಿದೆ. ಕಳೆದ ಬಜೆಟ್‌ಗಿಂತ ಶೇ.8ರಷ್ಟು ಕಡಿಮೆ ಮಾಡಿದೆ.

2024-25ನೇ ಸಾಲಿಗೆ ಆಹಾರದ ಮೇಲೆ ನೀಡಲಾಗುತ್ತಿದ್ದ ಸಹಾಯಧನದ ಮೊತ್ತವನ್ನು 2.05 ಲಕ್ಷ ಕೋಟಿ ರು.ಗೆ ನಿಗದಿಪಡಿಸಿದೆ. ಈ ಮೊತ್ತ ಪ್ರಸಕ್ತ ವರ್ಷಕ್ಕೆ 2.12 ಲಕ್ಷ ಕೋಟಿ ಹಾಗೂ 2022-23ನೇ ಸಾಲಿಗೆ 2.72 ಲಕ್ಷ ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಮೀಸಲಿರಿತ್ತು.

ಮತ್ತೊಂದೆಡೆ ಗೊಬ್ಬರ ಮೇಲಿನ ಸಹಾಯಧನ ಮೊತ್ತವನ್ನು ಈ ಬಾರಿ 1.64 ಲಕ್ಷ ಕೋಟಿ ರು,ಗೆ ಕೇಂದ್ರ ಸರ್ಕಾರ ಇಳಿಸಿದೆ. ಈ ಸಂಖ್ಯೆ ಪ್ರಸಕ್ತ ಹಣಕಾಸು ವರ್ಷದಲ್ಲಿ 1.89 ಲಕ್ಷ ಕೋಟಿ ರು. ನಿಗದಿಯಾಗಿತ್ತು ಹಾಗೂ ಕಳೆದ ವರ್ಷದಲ್ಲಿ 2.51 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ನಿಗದಿಪಡಿಸಿತ್ತು.

ಇನ್ನು ಈ ಬಾರಿಯ ಬಜೆಟ್‌ನಲ್ಲಿ ಇಂಧನದ ಮೇಲಿನ ಸಹಾಯಧನವನ್ನು ಸಹ ಕೊಂಚ ಇಳಿಕೆ ಮಾಡಲಾಗಿದೆ. ಕಳೆದ ವರ್ಷದ 12,240 ಕೋಟಿ ರು. ಇದ್ದಿದ್ದ ಮೊತ್ತ ಈ ವರ್ಷ 11,925 ಕೋಟಿ ರು.ಗೆ ಕೇಂದ್ರ ಸರ್ಕಾರ ಇಳಿಕೆ ಮಾಡಿದೆ.