ಭಾರತದಿಂದ ಅಮೆರಿಕದ ವಸ್ತುಗಳ ಮೇಲೆ ಮತ್ತಷ್ಟು ವಿದೇಶಿ ವಸ್ತು ಸುಂಕ ಕಡಿತ? ಪ್ರತಿ ತೆರಿಗೆ ಹೊಡೆತ ತಪ್ಪಿಸಿಕೊಳ್ಳುವ ಯತ್ನ

| N/A | Published : Feb 28 2025, 12:45 AM IST / Updated: Feb 28 2025, 06:24 AM IST

donald trump
ಭಾರತದಿಂದ ಅಮೆರಿಕದ ವಸ್ತುಗಳ ಮೇಲೆ ಮತ್ತಷ್ಟು ವಿದೇಶಿ ವಸ್ತು ಸುಂಕ ಕಡಿತ? ಪ್ರತಿ ತೆರಿಗೆ ಹೊಡೆತ ತಪ್ಪಿಸಿಕೊಳ್ಳುವ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕಕ್ಕೆ ಆಮದಾಗುವ ಭಾರತೀಯ ವಸ್ತುಗಳ ಮೇಲೆ ಪ್ರತಿತೆರಿಗೆ ಹೇರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಎಚ್ಚರಿಕೆ ಬೆನ್ನಲ್ಲೇ ಭಾರತ ಸರ್ಕಾರವು ಅಮೆರಿಕದ ವಸ್ತುಗಳ ಮೇಲೆ ಮತ್ತೊಂದು ಸುತ್ತಿನ ತೆರಿಗೆ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ.

ನವದೆಹಲಿ: ಅಮೆರಿಕಕ್ಕೆ ಆಮದಾಗುವ ಭಾರತೀಯ ವಸ್ತುಗಳ ಮೇಲೆ ಪ್ರತಿತೆರಿಗೆ ಹೇರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಎಚ್ಚರಿಕೆ ಬೆನ್ನಲ್ಲೇ ಭಾರತ ಸರ್ಕಾರವು ಅಮೆರಿಕದ ವಸ್ತುಗಳ ಮೇಲೆ ಮತ್ತೊಂದು ಸುತ್ತಿನ ತೆರಿಗೆ ಕಡಿತಕ್ಕೆ ಮುಂದಾಗಿದೆ ಎನ್ನಲಾಗಿದೆ. ಈ ಮೂಲಕ ಪ್ರತಿ ತೆರಿಗೆ ಹೊಡೆತದಿಂದ ತಪ್ಪಿಸಿಕೊಳ್ಳುವ ಯತ್ನ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಫೆ.1ರ ಕೇಂದ್ರ ಬಜೆಟ್‌ನಲ್ಲಿ ಮೊದಲ ಬಾರಿಗೆ ಐಷಾರಾಮಿ ಕಾರುಗಳು ಮತ್ತು ಬೋರ್ಬೋರ್ನ್‌ ವಿಸ್ಕಿ ಮೇಲಿನ ತೆರಿಗೆ ಕಡಿತ ಘೋಷಿಸಿದ್ದ ಕೇಂದ್ರ ಈಗ ಮತ್ತೊಂದಷ್ಟು ವಸ್ತುಗಳ ಮೇಲೆ ತೆರಿಗೆ ಇಳಿಸಲು ಮುಂದಾಗಿದೆ. ಅದರನ್ವಯ ಕಾರುಗಳು, ರಾಸಾಯನಿಕ, ಆಟೋಮೊಬೈಲ್‌, ಕೃಷಿ ಉತ್ಪನ್ನಗಳು, ಅಗತ್ಯ ಔಷಧಗಳು ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ಮೇಲಿನ ಆಮದು ಸುಂಕವನ್ನು ಇಳಿಸಲು ಕೇಂದ್ರ ದಾಪುಗಾಲು ಇರಿಸಿದೆ. ಇದು ಸಾಧ್ಯವಾದರೆ ಅಮೆರಿಕದ ವಸ್ತುಗಳ ಬೆಲೆ ಇಳಿಕೆಯಾಗಲಿದೆ’ ಎಂದು ಮೂಲಗಳು ಹೇಳಿವೆ.

ಈ ಮೂಲಕ 2030ರ ವೇಳೆಗೆ ಅಮೆರಿಕದೊಂದಿಗಿನ ವ್ಯಾಪಾರವನ್ನು 300 ಬಿಲಿಯನ್‌ ಡಾಲರ್‌ಗೆ ಏರಿಸುವ ಗುರಿಯನ್ನು ಭಾರತ ಸರ್ಕಾರ ಹೊಂದಿದೆ ಎಂದು ಮೂಲಗಳು ತಿಳಿಸಿವೆ.ಏನಿದು ಪ್ರತಿ ತೆರಿಗೆ?

ಒಂದು ದೇಶದಿಂದ ರಫ್ತಾಗುವ ವಸ್ತುವಿಗೆ ಮತ್ತೊಂದು ದೇಶ ಎಷ್ಟು ಆಮದು ಸುಂಕ ವಿಧಿಸುತ್ತದೆಯೋ, ಅದೇ ಪ್ರಮಾಣದ ಸುಂಕವನ್ನು ಆ ದೇಶದಿಂದ ತರಿಸಿಕೊಳ್ಳುವ ವಸ್ತುಗಳ ಮೇಲೆ ಹೇರುವುದೇ ಪರಸ್ಪರ ಸುಂಕ.