ಮೋದಿ- ರಾಹುಲ್ ಮುಖಾಮುಖಿ ಚರ್ಚೆಗೆ ಸಲಹೆ

| Published : May 10 2024, 01:34 AM IST / Updated: May 10 2024, 07:15 AM IST

ಸಾರಾಂಶ

ಹಿರಿಯ ಪತ್ರಕರ್ತ ಮತ್ತು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ, ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದಾರೆ.

ನವದೆಹಲಿ: ಹಿರಿಯ ಪತ್ರಕರ್ತ ಮತ್ತು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ, ಸದ್ಯ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಲ್ಲಿ ಭಾಗವಹಿಸುವಂತೆ ಪತ್ರ ಬರೆದಿದ್ದಾರೆ.

‘ದಿ ಹಿಂದೂ’ ಸುದ್ದಿ ಪತ್ರಿಕೆಯ ಮಾಜಿ ಸಂಪದಾದಕ ಎನ್. ರಾಮ್ ,ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಮದನ್ ಲೋಕೂರ್‌, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಎ.ಪಿ.ಶಾ ಇಬ್ಬರೂ ನಾಯಕರಿಗೆ ಪಕ್ಷಾತೀತ ವೇದಿಕೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ಚರ್ಚಿಸಲು ಪತ್ರ ಬರೆದಿದ್ದಾರೆ.

‘ಈ ರೀತಿಯ ಚರ್ಚೆಗಳು,ಒಂದು ದೊಡ್ಡ ನಿದರ್ಶನವಾಗಿ ಉಳಿಯಲಿದೆ. ಇದು ಸಾರ್ವಜನಿಕರಿಗೆ ಶಿಕ್ಷಣ ನೀಡುವುದು ಮಾತ್ರವಲ್ಲದೇ, ಪ್ರಜಾಪ್ರಭುತ್ವದ ಆರೋಗ್ಯಕರ ಮತ್ತು ರೋಮಾಂಚನಕಾರಿ ಚಿತ್ರಣಗಳನ್ನು ಪ್ರದರ್ಶಿಸುತ್ತದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.