ಸರ್ಕಾರಿ ನಿವಾಸ ಬಿಟ್ಟು ಚೌಟಾಲಾರ ತೋಟದ ಮನೆಗೆ ಧನಕರ್‌ ಶಿಫ್ಟ್‌

| N/A | Published : Sep 02 2025, 01:00 AM IST / Updated: Sep 02 2025, 05:06 AM IST

Jagdeep Dhankar

ಸಾರಾಂಶ

ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ತಮಗೆ ಈ ಹಿಂದೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೊರೆದು ಖಾಸಗಿ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ.

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ಅವರು ತಮಗೆ ಈ ಹಿಂದೆ ನೀಡಲಾಗಿದ್ದ ಸರ್ಕಾರಿ ನಿವಾಸವನ್ನು ತೊರೆದು ಖಾಸಗಿ ತೋಟದ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಮಾಜಿ ರಾಷ್ಟ್ರಪತಿಗಳಿಗೆ ನೀಡುವ ಹೊಸ ಮನೆ ಹಸ್ತಾಂತರದ ಬಳಿಕ ಧನಕರ್‌ ಮರಳಿ ಹೊಸ ಸರ್ಕಾರಿ ನಿವಾಸಕ್ಕೆ ತೆರಳಲಿದ್ದಾರೆ. ಆದರೆ ನಿವಾಸ ಕೋರಿ ಇನ್ನೂ ಧನಕರ್‌ ಅರ್ಜಿ ಸಲ್ಲಿಸಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

ದಕ್ಷಿಣ ದೆಹಲಿಯ ಗಡಾಯಿಪುರದಲ್ಲಿ ಐಎನ್‌ಎಲ್‌ಡಿ ನಾಯಕ ಅಭಯ್‌ ಚೌಟಾಲಾ ಅವರ ತೋಟದ ಮನೆ ಇದ್ದು, ಅಲ್ಲಿಗೆ ಧನಕರ್‌ ಕುಟುಂಬ ಸಮೇತ ತಮ್ಮ ವಾಸ್ತವ್ಯ ಬದಲಾಯಿಸಿದ್ದಾರೆ. ಧನಕರ್‌ ಅವರು ಜಾಟ್‌ ಸಮುದಾಯದ ಹಿರಿಯ ನಾಯಕ ಮಾಜಿ ಉಪಪ್ರಧಾನಿ ದೇವಿಲಾಲ್‌ ಅವರ ಆಪ್ತರಾಗಿದ್ದರು. ಬಳಿಕ ದೇವಿಲಾಲ್ ಅವರ ಪುತ್ರ ಓಂ ಪ್ರಕಾಶ್‌ ಚೌತಾಲಾ ಜೊತೆಗೂ ಉತ್ತಮ ನಂಟು ಹೊಂದಿದ್ದರು. ಅದೇ ಆಪ್ತತೆಯಲ್ಲಿ ಇದೀಗ ಓಂ ಪ್ರಕಾಶ್‌ ಚೌತಾಲಾ ಅವರ ಪುತ್ರ ಅಭಯ್‌, ತಮ್ಮ ಫಾರ್ಮ್‌ಹೌಸ್‌ನಲ್ಲಿ ಇರಲು ಧನಕರ್‌ ಅವರಿಗೆ ಆಹ್ವಾನ ನೀಡಿದ್ದರು.

Read more Articles on