ಜೀವ ವಿಮೆ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ಶೇ.18ರಷ್ಟು ಜಿಎಸ್‌ಟಿ: ಸಚಿವ ಗಡ್ಕರಿ ವಿರೋಧ

| Published : Aug 01 2024, 12:15 AM IST / Updated: Aug 01 2024, 10:16 AM IST

ಜೀವ ವಿಮೆ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ಶೇ.18ರಷ್ಟು ಜಿಎಸ್‌ಟಿ: ಸಚಿವ ಗಡ್ಕರಿ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಜೀವ ವಿಮೆ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ವಿಧಿಸಲಾಗುತ್ತಿರುವ ಶೇ.18ರಷ್ಟು ಜಿಎಸ್ಟಿ ರದ್ದುಪಡಿಸುವಂತೆ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಮನವಿ ಮಾಡಿದ್ದಾರೆ.

ನವದೆಹಲಿ: ಜೀವ ವಿಮೆ ಮತ್ತು ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ವಿಧಿಸಲಾಗುತ್ತಿರುವ ಶೇ.18ರಷ್ಟು ಜಿಎಸ್ಟಿ ರದ್ದುಪಡಿಸುವಂತೆ ಕೋರಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೇಂದ್ರ ರಸ್ತೆ ಸಾರಿಗೆ ಖಾತೆ ಸಚಿವ ನಿತಿನ್‌ ಗಡ್ಕರಿ ಮನವಿ ಮಾಡಿದ್ದಾರೆ.

ನಾಗಪುರ ವಿಭಾಗೀಯ ಜೀವ ವಿಮಾ ಕಾರ್ಪೊರೇಷನ್‌ ಉದ್ಯೋಗಿಗಳ ಸಂಘಟನೆ ತಮಗೆ ಸಲ್ಲಿಸಿದ್ದ ಮನವಿ ಆಧರಿಸಿ ಗಡ್ಕರಿ ಅವರು ಈ ಕುರಿತು ಪತ್ರ ಬರೆದಿದ್ದಾರೆ.‘ಜೀವ ವಿಮೆ ಪ್ರೀಮಿಯಂ ಮೇಲೆ ಜಿಎಸ್ಟಿ ವಿಧಿಸುವುದು, ಜೀವನದ ಅನಿಶ್ಚಿತೆತೆ ಮೇಲೆ ತೆರಿಗೆ ಹಾಕಿದಂತೆ. ಅಪಾಯದಿಂದ ರಕ್ಷಣೆ ಬಯಸಿ ಪಡೆದಿರುವ ವಿಮೆಯ ಮೇಲೆ ತೆರಿಗೆ ವಿಧಿಸುವುದು ಸೂಕ್ತ ಅಲ್ಲ ಎಂಬ ಸಂಘಟನೆಯ ಕಳಕಳಿಯನ್ನು ಗಡ್ಕರಿ ತಮ್ಮ ಪತ್ರದಲ್ಲೂ ಪ್ರಸ್ತಾಪಿಸಿದ್ದಾರೆ.