ಸಾರಾಂಶ
ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ವನ್ನು 2027ರ ಮೊದಲ ತ್ರೈಮಾಸಿಕದಲ್ಲಿ ನಡೆಸಲು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಧರಿಸಿದೆ. ಈ ಮಿಷನ್ ಅನ್ನು 2022ರಲ್ಲೇ ಕೈಗೊಳ್ಳಲು ಈ ಮೊದಲು ಯೋಜಿಸಲಾಗಿತ್ತು.
- ಈ ಮುನ್ನ 2022ಕ್ಕೆ ನಡೆಸಲು ನಿರ್ಧರಿಸಲಾಗಿತ್ತುನವದೆಹಲಿ: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನಯಾನ’ವನ್ನು 2027ರ ಮೊದಲ ತ್ರೈಮಾಸಿಕದಲ್ಲಿ ನಡೆಸಲು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಧರಿಸಿದೆ. ಈ ಮಿಷನ್ ಅನ್ನು 2022ರಲ್ಲೇ ಕೈಗೊಳ್ಳಲು ಈ ಮೊದಲು ಯೋಜಿಸಲಾಗಿತ್ತು. ಈ ಬಗ್ಗೆ ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ‘ಇದೇ ವರ್ಷಾಂತ್ಯದಲ್ಲಿ ಮಾನವ ರಹಿತ ಗಗನಯಾನ ಮಿಷನ್ ನಡೆಯುವ ನಿರೀಕ್ಷೆಯಿದೆ. ಬಳಿಕ 2026ರಲ್ಲೂ ಇಂತಹ 2 ಮಿಷನ್ಗಳನ್ನು ಕೈಗೊಳ್ಳಲಾಗುವುದು. ಅಂತಿಮವಾಗಿ ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ಹಾರುವ ಮೊದಲು ಮಾನವಾಕೃತಿಯ ‘ವ್ಯೋಮಿತ್ರಾ’ ರೋಬೋಟ್ಅನ್ನು ಭೂಮಿಯ ಕೆಳಕಕ್ಷೆಗೆ ಕಳಿಸಲಾಗುವುದು. ಇದರ ಶೇ.90ರಷ್ಟು ಕೆಲಸಗಳು ಆಗಿವೆ’ ಎಂದರು. 2018ರ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, 2022ರಲ್ಲಿ ಗಗನಯಾನ ಮಿಷನ್ ಅನ್ನು ಕೈಗೊಳ್ಳಲಾಗುವುದು ಎಂದು ಘೋಷಿಸಿದ್ದರು.