ಸಾರಾಂಶ
 ಭಾರತೀಯ ಸೇನೆಯ 30ನೇ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.
ನವದೆಹಲಿ: ಭಾರತೀಯ ಸೇನೆಯ 30ನೇ ಮುಖ್ಯಸ್ಥರಾಗಿ ಜನರಲ್ ಉಪೇಂದ್ರ ದ್ವಿವೇದಿ ಅವರು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.ಈವರೆಗೆ ಮುಖ್ಯಸ್ಥರಾಗಿದ್ದ ಜ। ಮನೋಜ್ ಪಾಂಡೆ ನಿವೃತ್ತಿ ಹೊಂದಿದ್ದು. ಇದರ ಬೆನ್ನಲ್ಲೇ ದ್ವಿವೇದಿ ಅಧಿಕಾರ ವಹಿಸಿಕೊಂಡರು.
ಗಡಿ ಭಾಗದಲ್ಲಿ ಚೀನಾದೊಂದಿಗಿನ ಉದ್ವಿಗ್ನತೆ ಬೂದಿ ಮುಚ್ಚಿದ ಕೆಂಡದಂತೆ ಇರುವ ಹೊತ್ತಿನಲ್ಲಿ 13 ಲಕ್ಷ ಯೋಧರ ಮುಖ್ಯಸ್ಥರಾಗಿರುವ ಇವರು ಅಧಿಕಾರ ವಹಿಸಿಕೊಂಡಿದ್ದು ವಿಶೇಷ. ಚೀನಾ ವ್ಯವಹಾರದಲ್ಲಿ ಜ। ದ್ವಿವೇದಿ ತಜ್ಞರು ಎಂದು ಪ್ರಸಿದ್ಧಿ ಪಡೆದಿದ್ದಾರೆ.
ಪರಮ್ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ದ್ವಿವೇದಿ ಅವರು ಈ ಮೊದಲು ಸೇನೆಯ ಉಪ ಮುಖ್ಯಸ್ಥರಾಗಿ ಹಾಗೂ 2022-2024ರ ಅವಧಿಯಲ್ಲಿ ಉತ್ತರ ಕಮಾಂಡ್‌ನ ಪ್ರಧಾನ ಕಮಾಂಡಿಂಗ್-ಇನ್-ಚೀಫ್ ಆಗಿ ಸೇವೆ ಸಲ್ಲಿಸಿದ್ದಾರೆ.
;Resize=(690,390))
)
;Resize=(128,128))
;Resize=(128,128))
;Resize=(128,128))
;Resize=(128,128))