ವೈದ್ಯರ ಎಡವಟ್ಟು: ಕೈ ಬೆರಳಿಗೆ ಬದಲು ನಾಲಿಗೆಗೆ ಶಸ್ತ್ರ ಚಿಕಿತ್ಸೆ

| Published : May 17 2024, 12:38 AM IST / Updated: May 17 2024, 05:33 AM IST

ಸಾರಾಂಶ

ಕೈ ಬೆರಳಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 4 ವರ್ಷ ಮಗುವಿನ ಬೆರಳಿನ ಬದಲು ವೈದ್ಯರು ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ಕಲ್ಲಿಕೋಟೆ: ಕೈ ಬೆರಳಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ 4 ವರ್ಷ ಮಗುವಿನ ಬೆರಳಿನ ಬದಲು ವೈದ್ಯರು ಗಂಟಲಿಗೆ ಶಸ್ತ್ರಚಿಕಿತ್ಸೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದಿದೆ.

ನಾಲ್ಕು ವರ್ಷದ ಮಗುವಿಗೆ 6 ಕೈ ಬೆರಳುಗಳು ಇದ್ದು, ಅದರಲ್ಲಿ ಒಂದು ಬೆರಳನ್ನು ಶಸ್ತ್ರ ಚಿಕಿತ್ಸೆ ಮೂಲಕ ತೆಗೆಯಬೇಕಿದ್ದ ವೈದ್ಯರು ಮೈಮರೆತು ಆ ಮಗುವಿನ ಬೆರಳಿಗೆ ಶಸ್ತ್ರ ಚಿಕಿತ್ಸೆ ಮಾಡದೇ ನಾಲಿಗೆಗೆ ಶಸ್ತ್ರ ಚಿಕಿತ್ಸೆ ಮಾಡಿಬಿಟ್ಟಿದ್ದಾರೆ. ಕೇಳಿದರೆ ಗಂಟಲಲ್ಲೂ ತೊಂದರೆ ಇತ್ತು ಹಾಗಾಗಿ ಶಸ್ತ್ರಚಿಕಿತ್ಸೆ ಮಾಡಲಾಯ್ತು ಎಂದು ಹಾರಿಕೆ ಉತ್ತರ ನೀಡಿದ್ದಾರೆ. 

ಈ ಬಗ್ಗೆ ಪೋಷಕರ ಗದರಿದ ಬಳಿಕ ಘಟನೆ ಕುರಿತು ಕ್ಷಮೆಯಾಚಿಸಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಲಾಗಿದೆ.ಕೆಲ ದಿನಗಳ ಹಿಂದೆ ವೈದ್ಯರು ಶಸ್ತ್ರಚಿಕಿತ್ಸೆ ಬಳಿಕ ಕತ್ತರಿಯನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟು ವಿವಾದಕ್ಕೀಡಾಗಿದ್ದರು.