ಮಹಾರಾಷ್ಟ್ರ, ಪಶ್ಚಿಮ ಬಂಗಾಳಬಳಿಕ ಅಸ್ಸಾಂನಲ್ಲಿ ಜಿಬಿಎಸ್‌ಹಾವಳಿ : 17ರ ಯುವತಿ ಸಾವು

| N/A | Published : Feb 02 2025, 01:01 AM IST / Updated: Feb 02 2025, 05:04 AM IST

ಸಾರಾಂಶ

ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಜನರನ್ನು ಬಲಿಪಡೆದಿದ್ದ ಗುಯಿಲಿನ್‌ ಬರ್ರೆ (ಜಿಬಿಎಸ್‌) ವ್ಯಾಧಿ ಇದೀಗ ಈಶಾನ್ಯ ರಾಜ್ಯ ಅಸ್ಸಾಂಗೂ ಕಾಲಿಟ್ಟಿದೆ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 17 ವರ್ಷದ ಯುವತಿ ಶಂಕಿತ ಗುಯಿಲಿನ್ ಬರ್ರೆಗೆ ಬಲಿಯಾಗಿದ್ದಾಳೆ.

ಗುವಾಹಟಿ: ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಜನರನ್ನು ಬಲಿಪಡೆದಿದ್ದ ಗುಯಿಲಿನ್‌ ಬರ್ರೆ (ಜಿಬಿಎಸ್‌) ವ್ಯಾಧಿ ಇದೀಗ ಈಶಾನ್ಯ ರಾಜ್ಯ ಅಸ್ಸಾಂಗೂ ಕಾಲಿಟ್ಟಿದೆ. ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ 17 ವರ್ಷದ ಯುವತಿ ಶಂಕಿತ ಗುಯಿಲಿನ್ ಬರ್ರೆಗೆ ಬಲಿಯಾಗಿದ್ದಾಳೆ. ಇದು ರಾಜ್ಯದಲ್ಲಿ ದಾಖಲಾದ ಮೊದಲ ಸಾವಿನ ಪ್ರಕರಣವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಆರೋಗ್ಯ ಇಲಾಖೆ ಅಥವಾ ಆಸ್ಪತ್ರೆಯಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

‘ಬಾಲಕಿಯನ್ನು ಸುಮಾರು 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದು ಜಿಬಿಎಸ್‌ನ ಅತ್ಯಂತ ತೀವ್ರವಾದ ವಿಧವಾಗಿದ್ದರಿಂದ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ಪರಿಸ್ಥಿತಿ ಕೈಮೀರಿದ್ದರಿಂದ ಸಾವನ್ನಪ್ಪಿದ್ದಾಳೆ. ಆಕೆಯ ರೋಗಲಕ್ಷಣಗಳು ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲಿ ಕಂಡುಬಂದ ಜಿಬಿಎಸ್‌ನಂತೆಯೇ ಇದ್ದವು ಎಂದು ಆಸ್ಪತ್ರೆಯ ಮಕ್ಕಳ ತಜ್ಞರು ತಿಳಿಸಿದ್ದಾರೆ.