ಗೋವಾ ಪ್ರವಾಸಿಗರ ಸಂಖ್ಯೆ ಕುಸಿತಕ್ಕೆ ಇಡ್ಲಿ, ಸಾಂಬಾರ್‌ ಕಾರಣ : ಬಿಜೆಪಿ ಶಾಸಕ ಮೈಕೆಲ್ ಲೋಬೊ

| N/A | Published : Feb 28 2025, 12:51 AM IST / Updated: Feb 28 2025, 06:07 AM IST

ಸಾರಾಂಶ

ಗೋವಾ ಬೀಚ್‌ಗಳಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಗುರುವಾರ ಹೇಳಿದ್ದಾರೆ.

ಪಣಜಿ: ಗೋವಾ ಬೀಚ್‌ಗಳಲ್ಲಿ ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿರುವುದರಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ ಎಂದು ಬಿಜೆಪಿ ಶಾಸಕ ಮೈಕೆಲ್ ಲೋಬೊ ಗುರುವಾರ ಹೇಳಿದ್ದಾರೆ.

ಉತ್ತರ ಗೋವಾದ ಕ್ಯಾಲಂಗೂಟ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾದರೆ ಅದಕ್ಕೆ ಸರ್ಕಾರ ಮಾತ್ರ ಕಾರಣವಲ್ಲ, ವ್ಯಾಪಾರಸ್ಥರೂ ಹೌದು. ಬೆಂಗಳೂರಿನ ಕೆಲವರು ವಡಾ ಪಾವ್, ಇಡ್ಲಿ-ಸಾಂಬಾರ್ ಮಾರಾಟ ಮಾಡುತ್ತಿದ್ದಾರೆ. ಇದು ವಿದೇಶಿಗರಿಗೆ ಇಷ್ವಿಲ್ಲ. ಅದಕ್ಕಾಗಿಯೇ ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಕುಸಿಯುತ್ತಿದೆ’ ಎಂದರು.

‘ವಿದೇಶಗಳ ಯುವ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗೋವಾಕ್ಕೆ ಬರುತ್ತಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ಪ್ರವಾಸೋದ್ಯಮ ಇಲಾಖೆ ಮತ್ತು ಇತರ ಪಾಲುದಾರರು ಜಂಟಿ ಸಭೆ ನಡೆಸಿ ವಿದೇಶಿ ಪ್ರವಾಸಿಗರು ಗೋವಾದಿಂದ ವಿಮುಖರಾಗುತ್ತಿರಲು ಕಾರಣಗಳನ್ನು ಅಧ್ಯಯನ ಮಾಡಬೇಕು’ ಎಂದರು.