ಸಾರಾಂಶ
ಗೋವಾದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಪೊಲೀಸರು ವಿಶೇಷ ಕ್ಯೂಆರ್ ಕೋಡ್ ಪರಿಚಯಿಸಲು ಮುಂದಾಗಿದ್ದು, 12 ಗಂಟೆ ಕಾಲ ಮಾನ್ಯವಾಗಿರುವ ಈ ಕ್ಯೂಆರ್ ಕೋಡ್ ನೆರವಿನಿಂದ ಪದೇ ಪದೇ ಪೊಲೀಸರಿಗೆ ವಾಹನಗಳ ದಾಖಲೆ ತೋರಿಸಬೇಕಾದ ಅಗತ್ಯವಿರುವುದಿಲ್ಲ
ಪಣಜಿ: ಗೋವಾದಲ್ಲಿ ಪ್ರವಾಸಿಗರ ಸುಗಮ ಸಂಚಾರಕ್ಕಾಗಿ ಪೊಲೀಸರು ವಿಶೇಷ ಕ್ಯೂಆರ್ ಕೋಡ್ ಪರಿಚಯಿಸಲು ಮುಂದಾಗಿದ್ದು, 12 ಗಂಟೆ ಕಾಲ ಮಾನ್ಯವಾಗಿರುವ ಈ ಕ್ಯೂಆರ್ ಕೋಡ್ ನೆರವಿನಿಂದ ಪದೇ ಪದೇ ಪೊಲೀಸರಿಗೆ ವಾಹನಗಳ ದಾಖಲೆ ತೋರಿಸಬೇಕಾದ ಅಗತ್ಯವಿರುವುದಿಲ್ಲ. ಈ ಕ್ರಮ ಜಾರಿಗೆ ತಂದ ದೇಶದ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಗೋವಾ ಪಾತ್ರವಾಗಲಿದೆ.
ಗೋವಾಕ್ಕೆ ಪ್ರವಾಸಿಗರ ಅನುಕೂಲಕ್ಕಾಗಿ ಈ ಕ್ಯೂರ್ ಕೋಡ್ ತಂದಿದ್ದು, ಇದರ ಮೂಲಕ ನೀವು ಒಮ್ಮೆ ದಾಖಲೆಗಳನ್ನು ಸ್ಕ್ಯಾನ್ ಮಾಡಿದ ನಂತರ, ನಿಮ್ಮ ಪ್ರಯಾಣದಲ್ಲಿ ಪೊಲೀಸರಿಗೆ ಪದೇ ಪದೇ ತೋರಿಸುವ ಅಗತ್ಯವಿರುವುದಿಲ್ಲ. 12 ಗಂಟೆ ಈ ಕ್ಯೂಆರ್ ಕೋಡ್ ಮಾನ್ಯವಾಗಿರಲಿದ್ದು, ಪೊಲೀಸರು ಪದೇ ಪದೇ ತಪಾಸಣೆಗೆ ಮುಂದಾದರೆ , ಪ್ರವಾಸಿಗರು ಕ್ಯೂ ಆರ್ ಕೋಡ್ ತೋರಿಸಿದರೆ ಸಾಕು. ಇದುವರೆಗೆ 4 ಸಾವಿರ ಕ್ಯೂಆರ್ ಕೋಡ್‌ಗಳನ್ನು ಪೊಲೀಸರು ನೀಡಿದ್ದಾರೆ. ಗೋವಾದ ಪಡ್ರೆ ಕಾನ್ಸಿಕಾವೊ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.