ಚಿನ್ನದ ಬೆಲೆ 10 ಗ್ರಾಂಗೆ ₹1.14 ಲಕ್ಷ : ದಾಖಲೆ

| N/A | Published : Sep 10 2025, 01:03 AM IST / Updated: Sep 10 2025, 05:00 AM IST

Gold Price

ಸಾರಾಂಶ

ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2400 ರು. ಏರಿಕೆಯಾಗಿ, 10 ಗ್ರಾಂಗೆ 1,14,800 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಬೆಳ್ಳಿ ಬೆಲೆಯು 2500 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,32,700 ರು.ಗೆ ಜಿಗಿದಿದೆ.

  ನವದೆಹಲಿ :  ದೇಶದಲ್ಲಿ ಮತ್ತೆ ಚಿನ್ನದ ಬೆಲೆಯು ಏರಿಕೆಯಾಗಿದ್ದು, ರಾಜಧಾನಿ ಬೆಂಗಳೂರಿನಲ್ಲಿ 99.5 ಶುದ್ಧತೆಯ ಚಿನ್ನದ ಬೆಲೆಯು 2400 ರು. ಏರಿಕೆಯಾಗಿ, 10 ಗ್ರಾಂಗೆ 1,14,800 ರು.ಗೆ ತಲುಪಿದೆ. ಇದು ಸಾರ್ವಕಾಲಿಕ ದಾಖಲೆ. ಜೊತೆಗೆ ಬೆಳ್ಳಿ ಬೆಲೆಯು 2500 ರು. ಏರಿಕೆಯಾಗಿ ಕೇಜಿಗೆ ದಾಖಲೆಯ 1,32,700 ರು.ಗೆ ಜಿಗಿದಿದೆ.

ಅಮೆರಿಕದಲ್ಲಿನ ಕಾರ್ಮಿಕ ನೀತಿ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತದಿಂದಾಗಿ ಹೂಡಿಕೆದಾರರು ಅಮೂಲ್ಯ ಲೋಹದ ಕಡೆಗೆ ಚಿತ್ತ ಹರಿಸಿದ್ದಾರೆ. ಹೀಗಾಗಿ ಚಿನ್ನದ ಬೆಲೆಯು ಜಿಗಿದಿದೆ. ಸೋಮವಾರ ಬೆಂಗಳೂರಿನಲ್ಲಿ 10 ಗ್ರಾಂ 99.5 ಶುದ್ಧತೆಯ ಚಿನ್ನ 1,12,400 ರು. ಇತ್ತು.

ಇದೇ ವೇಳೆ, ಬೆಳ್ಳಿ ಕೇಜಿಗೆ 1,30,200 ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 99.9 ಶುದ್ಧತೆಯ ಚಿನ್ನ 10 ಗ್ರಾಂಗೆ 5,080 ರು. ಏರಿಕೆಯಾಗಿ 1,12,750 ರು.ಗೆ ತಲುಪಿದೆ. ಬೆಳ್ಳಿ 2,800 ರು. ಜಿಗಿದು, ಕೇಜಿಗೆ 1,28,800 ರು.ಗೆ ತಲುಪಿದೆ.

Read more Articles on