ಚಿನ್ನದ ಬೆಲೆ ₹65000ಕ್ಕೆ ಏರಿಕೆ: ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ

| Published : Mar 06 2024, 02:24 AM IST / Updated: Mar 06 2024, 03:49 PM IST

ಚಿನ್ನದ ಬೆಲೆ ₹65000ಕ್ಕೆ ಏರಿಕೆ: ಸಾರ್ವಕಾಲಿಕ ಗರಿಷ್ಟ ಮಟ್ಟಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನವದೆಹಲಿಯಲ್ಲಿ 24 ಕ್ಯಾರಟ್‌ ಚಿನ್ನದ ಬೆಲೆ ಮಂಗಳವಾರ 65 ಸಾವಿರ ರು.ಗೆ ಏರುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ.

ನವದೆಹಲಿ: ಕಳೆದ ಕೆಲ ದಿನಗಳಿಂದ ಏರಿಕೆಯ ಹಾದಿಯಲ್ಲಿರುವ ಚಿನ್ನದ ಬೆಲೆ ಮಂಗಳವಾರ ದೆಹಲಿಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂಗೆ 800 ರು. ಏರಿಕೆ ಕಾಣುವ ಮೂಲಕ 65000 ರು. ತಲುಪಿದೆ. ಇದು ಚಿನ್ನದ ಸಾರ್ವಕಾಲಿಕ ಗರಿಷ್ಠ ದರವಾಗಿದೆ.

ಉಳಿದಂತೆ ಮುಂಬೈ ಮತ್ತು ಕೋಲ್ಕತ್ತಾದಲ್ಲಿ 24 ಕ್ಯಾರೆಟ್‌ ಚಿನ್ನದ ಬೆಲೆ 64,850 ರು. ಇದ್ದರೆ ಚೆನ್ನೈನಲ್ಲಿ 65,620 ರು.ಗೆ ಏರಿದೆ. ಇನ್ನೊಂದೆಡೆ ಬೆಳ್ಳಿ ಬೆಲೆ ಕೂಡಾ ಕೆಜಿಗೆ 900 ರು. ಏರಿಕೆ ಕಂಡು 74900 ರು.ಗೆ ತಲುಪಿದೆ.

ಅಮೆರಿಕದಲ್ಲಿ ವಾಣಿಜ್ಯ, ನಿರ್ಮಾಣ ವಲಯದಲ್ಲಿ ಹೂಡಿಕೆ ಕಡಿಮೆಯಾಗಿರುವುದು, ಕೇಂದ್ರೀಯ ಬ್ಯಾಂಕ್‌ ಶೀಘ್ರವೇ ಬಡ್ಡಿದರ ಕಡಿತ ಮಾಡುವ ಸುಳಿವು, ಹಣದುಬ್ಬರದ ಆತಂಕ ಕಡಿಮೆಯಾಗಿರುವುದು ಚಿನ್ನದ ಮೇಲೆ ಏರಿಕೆಗೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.