ಕೇಂದ್ರ ಸರ್ಕಾರದಿಂದ ‘ತುರ್ತು ಎಚ್ಚರಿಕೆ’ ಎಸ್ಸೆಮ್ಮೆಸ್ ಪರೀಕ್ಷೆ
KannadaprabhaNewsNetwork | Published : Oct 11 2023, 12:45 AM IST
ಕೇಂದ್ರ ಸರ್ಕಾರದಿಂದ ‘ತುರ್ತು ಎಚ್ಚರಿಕೆ’ ಎಸ್ಸೆಮ್ಮೆಸ್ ಪರೀಕ್ಷೆ
ಸಾರಾಂಶ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು
ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೇಶಾದ್ಯಂತ ಜಾರಿಗೊಳಿಸುತ್ತಿರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಸೋಮವಾರ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ ಅನೇಕ ನಾಗರಿಕರ ಮೊಬೈಲ್‌ಗಳಿಗೆ ಮಧ್ಯಾಹ್ನ ಎಸ್ಸೆಮ್ಮೆಸ್ ಬಂದಿವೆ. ಈ ವೇಳೆ ಫೋನ್‌ಗಳಲ್ಲಿ ಮಾಮೂಲಿ ಎಸ್ಸೆಮ್ಮೆಸ್ ಬಜರ್ ಸೌಂಡ್ ಬಾರದೇ, ವಿಚಿತ್ರ ಬಜರ್ ಧ್ವನಿಯೊಂದಿಗೆ ಈ ತುರ್ತು ಸಂದೇಶ ಪಾಪ್ ಅಪ್ ಆಗಿದೆ. ಇದರರ್ಥ ತುರ್ತು ಸಂದೇಶಗಳು ಇದೇ ಬಜರ್ ಸೌಂಡ್‌ನೊಂದಿಗೆ ಮೊಬೈಲ್‌ಗಳಿಗೆ ಬಂದು, ನಾಗರಿಕರನ್ನು ಎಚ್ಚರಿಸುತ್ತವೆ. ಸಂದೇಶದಲ್ಲಿ, ‘ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಮಾದರಿ ಪರೀಕ್ಷಾ ಸಂದೇಶವಾಗಿದೆ. ದಯವಿಟ್ಟು ಈ ಸಂದೇಶ ನಿರ್ಲಕ್ಷಿಸಿ. ನಿಮ್ಮ ಕಡೆಯಿಂದ ಯಾವುದೇ ಕ್ರಮದ ಅಗತ್ಯವಿಲ್ಲ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೆ ತಂದಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆ ಪರೀಕ್ಷಿಸಲು, ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆ ನೀಡುವ ಗುರಿಯನ್ನು ಈ ಸಂದೇಶ ಹೊಂದಿದೆ’ ಎಂದು ಬರೆಯಲಾಗಿದೆ. ವಿಚಿತ್ರ ಶಬ್ದದೊಂದಿಗೆ ಬಂದ ಈ ಎಸ್ಸೆಮ್ಮೆಎಸ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿದೆ.