ಠೇವಣಿ ವಿಮೆ ಮೊತ್ತ ₹5 ಲಕ್ಷಕ್ಕಿಂತ ಮೇಲೇರಿಸಲು ಚಿಂತನೆ : ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು

| N/A | Published : Feb 18 2025, 12:32 AM IST / Updated: Feb 18 2025, 04:26 AM IST

ಸಾರಾಂಶ

ಬ್ಯಾಂಕ್‌ ಅಥವಾ ಸಹಕಾರಿ ಸಂಸ್ಥೆಗಳು ನಷ್ಟಕ್ಕೊಳಗಾದ ವೇಳೆ ಠೇವಣಿ ಇಟ್ಟ ಗ್ರಾಹಕರಿಗೆ ನೆರವಾಗಲು ಇರುವ ಠೇವಣಿ ವಿಮೆ ಮೊತ್ತವನ್ನು ಹಾಲಿ ಇರುವ 5 ಲಕ್ಷ ರು.ಗಿಂತ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರ ಮುಂದಿದೆ ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಬ್ಯಾಂಕ್‌ ಅಥವಾ ಸಹಕಾರಿ ಸಂಸ್ಥೆಗಳು ನಷ್ಟಕ್ಕೊಳಗಾದ ವೇಳೆ ಠೇವಣಿ ಇಟ್ಟ ಗ್ರಾಹಕರಿಗೆ ನೆರವಾಗಲು ಇರುವ ಠೇವಣಿ ವಿಮೆ ಮೊತ್ತವನ್ನು ಹಾಲಿ ಇರುವ 5 ಲಕ್ಷ ರು.ಗಿಂತ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರ ಮುಂದಿದೆ ಎಂದು ಕೇಂದ್ರ ಸರ್ಕಾರ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ನ್ಯೂ ಇಂಡಿಯಾ ಸಹಕಾರಿ ಬ್ಯಾಂಕ್‌ ಹಗರಣದ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಣಕಾಸು ಇಲಾಖೆ ಕಾರ್ಯದರ್ಶಿ ನಾಗರಾಜು. ಠೇವಣಿ ವಿಮೆ ಮೊತ್ತ ಹೆಚ್ಚಳದ ಪ್ರಸ್ತಾಪ ಸರ್ಕಾರದ ಮುಂದಿದೆ. ಸರ್ಕಾರ ಅದನ್ನು ಅನುಮೋದಿಸಿದ ಬಳಿಕ ಈ ಕುರಿತು ಪ್ರಕಟಣೆ ಹೊರಡಿಸಲಾಗುವುದು ಎಂದರು. 2020ರವರೆಗೂ ಠೇವಣಿ ವಿಮೆ ಮೊತ್ತ ಕೇವಲ 1 ಲಕ್ಷ ರು. ಇತ್ತು.  

2020ರಲ್ಲಿ ಪಿಎಂಸಿ ಬ್ಯಾಂಕ್‌ ಹಗರಣದ ಬಳಿಕ ಅದನ್ನು5 ಲಕ್ಷ ರು.ಗೆ ಹೆಚ್ಚಿಸಲಾಗಿತ್ತು. ಈ ವಿಮೆಯ ಪ್ರೀಮಿಯಂ ಹಣವನ್ನು ಹಣಕಾಸು ಸಂಸ್ಥೆಗಳೇ ಪಾವತಿಸುತ್ತವೆ. ಗ್ರಾಹಕರ ಠೇವಣಿ ಹಣಕ್ಕೆ ಖಾತರಿ ನೀಡಲು ಈ ಯೋಜನೆ ಆರಂಭಿಸಲಾಗಿದೆ. ಬ್ಯಾಂಕ್‌ ನಷ್ಟಕ್ಕೀಡಾದ ವೇಳೆ ಗ್ರಾಹಕರಿಗೆ ಗರಿಷ್ಠ 5 ಲಕ್ಷ ರು. ವಿಮೆ ಹಣ ಸಿಗುತ್ತದೆ.