ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ ಹಾಗೂ ನೀರಾವರಿ ಯೋಜನೆಗಳಿಗಾಗಿ 11,500 ಕೋಟಿ ರು. ಆರ್ಥಿಕ ಬೆಂಬಲ

| Published : Jul 24 2024, 12:16 AM IST / Updated: Jul 24 2024, 12:05 PM IST

ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ ಹಾಗೂ ನೀರಾವರಿ ಯೋಜನೆಗಳಿಗಾಗಿ 11,500 ಕೋಟಿ ರು. ಆರ್ಥಿಕ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ ಹಾಗೂ ನೀರಾವರಿ ಯೋಜನೆಗಳಿಗಾಗಿ 11,500 ಕೋಟಿ ರು. ಆರ್ಥಿಕ ಬೆಂಬಲ ಯೋಜನೆಯನ್ನು ಘೋಷಿಸಲಾಗಿದೆ.

ನವದೆಹಲಿ :  ದೇಶದ ಹಲವು ರಾಜ್ಯಗಳಲ್ಲಿ ಪ್ರವಾಹ ನಿಯಂತ್ರಣ ಹಾಗೂ ನೀರಾವರಿ ಯೋಜನೆಗಳಿಗಾಗಿ 11,500 ಕೋಟಿ ರು. ಆರ್ಥಿಕ ಬೆಂಬಲ ಯೋಜನೆಯನ್ನು ಘೋಷಿಸಲಾಗಿದೆ.

ವೇಗವರ್ಧಿತ ನೀರಾವರಿ ಪ್ರಯೋಜನ ಕಾರ್ಯಕ್ರಮ ಹಾಗೂ ಇತರೆ ಮೂಲಗಳಿಂದ ಕೋಸಿ-ಮೇಚಿ ಅಂತರಾಜ್ಯ ಲಿಂಕ್ ಹಾಗೂ ಅಣೆಕಟ್ಟು, ನದಿ ನೀರು ಮಾಲಿನ್ಯ ನಿಯಂತ್ರಣ, ನೀರಾವರಿ ಯೋಜನೆಗಳು ಸೆರಿದಂತೆ ಚಾಲ್ತಿಯಲ್ಲಿರುವ ಇತರೆ 20 ಯೋಜನೆಗಳಿಗೆ ಆರ್ಥಿಕ ಬೆಂಬಲ ನೀಡಲಾಗುವುದು. -ಬಿಹಾರದಲ್ಲಿ ಪ್ರವಾಹ ತಡೆಗಟ್ಟಲು ನೇಪಾಳದಲ್ಲಿ ಪ್ರವಾಹ ನಿಯಂತ್ರಕಗಳನ್ನು ನಿರ್ಮಿಸಲಾಗುವುದು.

-ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳಿಂದ ಅಸ್ಸಾಂನಲ್ಲಿ ಉಂಟಾಗುವ ನೆರೆ ನಿಯಂತ್ರಿಸಲು ಪ್ರವಾಹ ನಿರ್ವಹಣೆ ಮತ್ತು ಸಂಬಂಧಿತ ಯೋಜನೆಗಳಿಂದ ನೆರವು.

-ಹಿಮಾಚಲ ಪ್ರದೇಶಕ್ಕೆ ಕಳೆದ ವರ್ಷ ಆದ ನಷ್ಟ ಭರಿಸಲು ಬಹುಪಕ್ಷೀಯ ಅಭಿವೃದ್ಧಿ ನೆರವಿನ ಮೂಲಕ ಪುನರ್ನಿರ್ಮಾಣ ಮತ್ತು ಪುನರ್ವಸತಿಗೆ ನೆರವು ನೀಡಲಾಗುವುದು.

-ಮೇಘಸ್ಫೋಟ ಮತ್ತು ಭೂಕುಸಿತದಿಂದ ತತ್ತರಿಸಿದ ಉತ್ತರಾಖಂಡ ಹಾಗೂ ಸಿಕ್ಕಿಂಗೆ ನೆರವು.