ಸಾರಾಂಶ
ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್ ಹಾಗೂ ಕಾಜೋಲ್ ಸೇರಿದಂತೆ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವು ನಟಿಯರ ಡೀಪ್ ಫೇಕ್ ವಿಡಿಯೋ ಮತ್ತು ಟೋಗಳು ವೈರಲ್ ಆದ ಬೆನ್ನಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನ.23ರಂದು ಎಲ್ಲ ಸಾಮಾಜಿಕ ಮಾಧ್ಯಮಗಳೊಂದಿಗೆ ಪ್ರಮುಖ ಸಭೆಯನ್ನು ಆಯೋಜಿಸಿದೆ.
ನವದೆಹಲಿ: ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್ ಹಾಗೂ ಕಾಜೋಲ್ ಸೇರಿದಂತೆ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವು ನಟಿಯರ ಡೀಪ್ ಫೇಕ್ ವಿಡಿಯೋ ಮತ್ತು ಟೋಗಳು ವೈರಲ್ ಆದ ಬೆನ್ನಲ್ಲೇ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ನ.23ರಂದು ಎಲ್ಲ ಸಾಮಾಜಿಕ ಮಾಧ್ಯಮಗಳೊಂದಿಗೆ ಪ್ರಮುಖ ಸಭೆಯನ್ನು ಆಯೋಜಿಸಿದೆ. ಯ್ಯೂಟ್ಯೂಬ್, ಟ್ವಿಟರ್, ಇನ್‌ಸ್ಟಾಗ್ರಾಂ ಮತ್ತು ವಾಟ್ಸಾಪ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿರುವ ಸರ್ಕಾರ ‘ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಡೀಪ್ ಫೇಕ್‌ನ ಸಮಸ್ಯೆಗಳು’ ವಿಷಯದ ಮೇಲೆ ಸಭೆಗೆ ಆಹ್ವಾನಿಸಿದೆ.