ಕೇಂದ್ರ ಬಜೆಟ್‌ 2024: ಈ ಸಲ 50 ಸಾವಿರ ಕೋಟಿ ರು. ಬಂಡವಾಳ ಹಿಂತೆಗೆತ ಗುರಿ

| Published : Feb 02 2024, 01:01 AM IST / Updated: Feb 02 2024, 09:07 AM IST

Union Budget 2024

ಸಾರಾಂಶ

ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಮಾಡಲು ಗುರಿ ತೆಗೆದುಕೊಳ್ಳಲಾಗಿದೆ. ಕಳೆದ ವರ್ಷ 30 ಸಾವಿರ ಕೋಟಿ ರು. ಗುರಿ ಹೊಂದಿದ್ದ ಕೇಂದ್ರ ಸರ್ಕಾರ ಅದನ್ನು ಹೆಚ್ಚಳ ಮಾಡಿಕೊಂಡಿದೆ

2024-25ನೇ ಸಾಲಿಗೆ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತದ ಗುರಿಯನ್ನು 50 ಸಾವಿರ ಕೋಟಿ ರು.ಗೆ ಹೆಚ್ಚಿಸಿಕೊಂಡಿದೆ. ಕಳೆದ ಬಜೆಟ್‌ನಲ್ಲಿ 30 ಸಾವಿರ ಕೋಟಿ ರು. ಪರಿಷ್ಕೃತ ಗುರಿ ಹೊಂದಿದ್ದ ಸರ್ಕಾರ, ಈ ಸಲ ಅದರ ಮೊತ್ತವನ್ನು ಇನ್ನೂ 20 ಸಾವಿರ ಕೋಟಿ ರು.ನಷ್ಟು ಹೆಚ್ಚಳ ಮಾಡಿದೆ.

ಕಳೆದ ವರ್ಷದ ಬಜೆಟ್‌ನಲ್ಲಿ 51 ಸಾವಿರ ಕೋಟಿ ರು.ನಷ್ಟು ಬಂಡವಾಳ ಹಿಂತೆಗೆತ ಮಾಡುವುದಾಗಿ ಸರ್ಕಾರ ಘೋಷಿಸಿ ಅದನ್ನು ಮಧ್ಯಂತರದಲ್ಲಿ 30 ಸಾವಿರ ಕೋಟಿ ರು.ಗೆ ಇಳಿಸಿ ಪರಿಷ್ಕರಿಸಿತ್ತು. 

ಏಕೆಂದರೆ ಅಂದುಕೊಂಡಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳಿಂದ ಬಂಡವಾಳ ಹಿಂತೆಗೆತ ಸಾಧ್ಯವಾಗಿರಲಿಲ್ಲ.ಈ ಸಾಲಿನಲ್ಲಿ ಸರ್ಕಾರ ಕೋಲ್‌ ಇಂಡಿಯಾ, ಎನ್ಎಚ್‌ಪಿಸಿ, ಆರ್‌ವಿಎನ್‌ಎಲ್‌ ಮತ್ತು ಐಆರ್‌ಡಿಇಎ ನಂಥ ಸರ್ಕಾರಿ ಸ್ವಾಮ್ಯದ ಕಂಪನಿಗಳ ಬಂಡವಾಳ ಹಿಂತೆಗೆತದಿಂದ 12,504 ಕೋಟಿ ರು. ಸಂಪಾದಿಸಿದೆ.

 ಮಾರ್ಚ್‌ ವೇಳೆಗೆ ಇದು 30 ಸಾವಿರ ಕೋಟಿ ರು. ತಲುಪಬಹುದು ಎಂಬ ನಿರೀಕ್ಷೆ ಹೊಂದಿದೆ.2017-18ರ ಬಳಿಕ 2 ಸಲ ಬಿಟ್ಟರೆ ಸರ್ಕಾರಕ್ಕೆ ಹೆಚ್ಚಾಗಿ ಬಂಡವಾಳ ಹಿಂತೆಗೆತ ಗುರಿ ತಲುಪಲು ಆಗುತ್ತಲೇ ಇಲ್ಲ. 2017-18ರಲ್ಲಿ 1 ಲಕ್ಷ ಕೋಟಿ ರು. ಬಂಡವಾಳ ಹಿಂಪಡೆದಿದ್ದು ಈವರೆಗಿನ ದಾಖಲೆ ಆಗಿದೆ.