ಆ್ಯಪ್‌ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನು

| Published : Dec 20 2024, 12:47 AM IST / Updated: Dec 20 2024, 04:19 AM IST

ಸಾರಾಂಶ

ಆ್ಯಪ್‌ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ಈ ಸಂಬಂಧ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಇದರ ಪ್ರಕಾರ ಅಪರಾಧಿಗಳಿಗೆ 10 ವರ್ಷ ಸೆರೆವಾಸ ಹಾಗೂ ದಂಡ ವಿಧಿಸಲಾಗುವುದು.

ನವದೆಹಲಿ: ಆ್ಯಪ್‌ ಸಾಲ ಸೇರಿ ಅನಿಯಂತ್ರಿತ ಸಾಲಕ್ಕೆ ಕಡಿವಾಣ ಹಾಕುವ ಸಲುವಾಗಿ ಕೇಂದ್ರ ಸರ್ಕಾರ ಹೊಸ ಕಾನೂನು ತರಲು ಮುಂದಾಗಿದ್ದು, ಈ ಸಂಬಂಧ ಮಸೂದೆ ಮಂಡಿಸಲು ಸಿದ್ಧತೆ ನಡೆಸಿದೆ. ಇದರ ಪ್ರಕಾರ ಅಪರಾಧಿಗಳಿಗೆ 10 ವರ್ಷ ಸೆರೆವಾಸ ಹಾಗೂ ದಂಡ ವಿಧಿಸಲಾಗುವುದು.

ಅನಿಯಂತ್ರಿತ ಸಾಲವನ್ನು ನಿಯಂತ್ರಿಸುವ ಸಲುವಾಗಿ ರಚಿಸಲಾಗಿದ್ದ ಆರ್‌ಬಿಐನ ತಂಡ 2021ರ ನವೆಂಬರ್‌ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ವ್ಯಕ್ತಿಗಳು ಅಥವಾ ಕಂಪನಿಗಳು ನೀಡುವ ಅನಿಯಂತ್ರಿತ ಸಾಲ ನಿಷೇಧಿಸುವ ಕಾನೂನು ಸೇರಿದಂತೆ ಕೆಲ ಕ್ರಮಗಳನ್ನು ಸೂಚಿಸಲಾಗಿದೆ.

ಇದರ ಪ್ರಕಾರ, ಡಿಜಿಟಲ್‌ ಅಥವಾ ಯಾವುದೇ ರೂಪದಲ್ಲಿ ಅನಿಯಂತ್ರಿತ ಸಾಲ ವ್ಯವಹಾರದಲ್ಲಿ ತೊಡಗಿದವರಿಗೆ ಕನಿಷ್ಠ 2 ವರ್ಷ, ಗರಿಷ್ಠ 7 ವರ್ಷ ಸೆರೆವಾಸ, 2 ಲಕ್ಷದಿಂದ 1 ಕೋಟಿ ರು. ವರೆಗೆ ದಂಡ ವಿಧಿಸಲಾಗುವುದು. ಸಾಲ ತೆಗೆದುಕೊಂಡವರ ಶೋಷಣೆ ಮಾಡಿದವರಿಗೆ 3ರಿಂದ 10 ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು.

ಸಾಲ ವ್ಯವಹಾರದಲ್ಲಿ ತೊಡಗಿದವರು ಅಥವಾ ಅವರ ಆಸ್ತಿಗಳು ವಿವಿಧ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿದ್ದರೆ, ಇಲ್ಲವೇ, ಸಾಲದ ಮೊತ್ತ ಅತ್ಯಧಿಕವಿದ್ದರೆ ಆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಲಾಗುವುದು. ಸಂಬಂಧಿತರು ಹೊಸ ಮಸೂದೆಯಾದ ಬುಲಾ(ಅನಿಯಂತ್ರಿತ ಸಾಲ) ಬಗ್ಗೆ 2025ರ ಫೆ.13ರ ಒಳಗೆ ಅಭಿಪ್ರಾಯಗಳನ್ನು ತಿಳಿಸಬಹುದು.