ಅಮೆರಿಕ-ಇರಾನ್ ನಡುವೆ ಶಾಂತಿ ಸಂಧಾನ ಏರ್ಪಟ್ಟ ಹಿನ್ನೆಲೆಯಲ್ಲಿ, ವಾಣಿಜ್ಯ ಎಲ್‌ಪಿಜಿ ಮೇಲೆ ಹೇರಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಗುರುವಾರ ತೆಗೆದುಹಾಕಿದೆ. ಈ ಮೂಲಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ನವದೆಹಲಿ: ಅಮೆರಿಕ-ಇರಾನ್ ನಡುವೆ ಶಾಂತಿ ಸಂಧಾನ ಏರ್ಪಟ್ಟ ಹಿನ್ನೆಲೆಯಲ್ಲಿ, ವಾಣಿಜ್ಯ ಎಲ್‌ಪಿಜಿ ಮೇಲೆ ಹೇರಿದ್ದ ನಿರ್ಬಂಧವನ್ನು ಕೇಂದ್ರ ಸರ್ಕಾರ ಗುರುವಾರ ತೆಗೆದುಹಾಕಿದೆ. ಈ ಮೂಲಕ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಇತರ ವಾಣಿಜ್ಯ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ದೇಶೀಯ ಉತ್ಪಾದನೆ ಹೆಚ್ಚಳ ಮತ್ತು ಎಲ್‌ಪಿಜಿ ಆಮದು ಸುಗಮ
‘ದೇಶೀಯ ಉತ್ಪಾದನೆ ಹೆಚ್ಚಳ ಮತ್ತು ಎಲ್‌ಪಿಜಿ ಆಮದು ಸುಗಮವಾಗಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯುದ್ಧ ಪೂರ್ವದಲ್ಲಿ ಸಂಪೂರ್ಣವಾಗಿ ನಿಲ್ಲಿಸಲಾಗಿದ್ದ ಸಗಟು (ಬಲ್ಕ್) ಎಲ್‌ಪಿಜಿ ಸರಬರಾಜನ್ನು ಶೇ.50ರಷ್ಟು ಪುನಾರಂಭ ಮಾಡಲಾಗಿದೆ’ ಎಂದು ಪೆಟ್ರೋಲಿಯಂ ಸಚಿವಾಲಯ ತಿಳಿಸಿದೆ.
ಇರಾನ್‌ನಿಂದ ಭಾರತದ ಶೇ.90ರಷ್ಟು ಎಲ್‌ಪಿಜಿ ಆಮದಾಗುತ್ತದೆ
ಮಧ್ಯಪ್ರಾಚ್ಯದಿಂದ, ಪ್ರಮುಖವಾಗಿ ಇರಾನ್‌ನಿಂದ ಭಾರತದ ಶೇ.90ರಷ್ಟು ಎಲ್‌ಪಿಜಿ ಆಮದಾಗುತ್ತದೆ. ಸಂಘರ್ಷದ ಸಮಯದಲ್ಲಿ ಸರ್ಕಾರ ಗೃಹ ಬಳಕೆದಾರರಿಗೆ ಎಲ್‌ಪಿಜಿ ಲಭ್ಯತೆಯನ್ನು ಖಚಿತಪಡಿಸಲು ವಾಣಿಜ್ಯ ಸರಬರಾಜನ್ನು ನಿರ್ಬಂಧಿಸಿತ್ತು. ಆ ಬಳಿಕ ಶೇ.70ರಷ್ಟು ಲಭ್ಯತೆಯನ್ನು ಮರುಸ್ಥಾಪಿಸಲಾಗಿತ್ತು. ಈಗ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದ್ದು, ಯುದ್ಧಪೂರ್ವದ ಸಹಜ ಸ್ಥಿತಿಯಂತೆ ಪೂರೈಸುವುದಾಗಿ ತಿಳಿಸಿದೆ.
ಇದೇ ವೇಳೆ ಸಗಟು ಎಲ್‌ಪಿಜಿ ಪೂರೈಕೆಯನ್ನು ಯುದ್ಧಪೂರ್ವ ಸ್ಥಿತಿಯ ಶೇ.50ಕ್ಕೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.
