ಕೇಂದ್ರ ಬಜೆಟ್‌ 2024: ₹14.13 ಲಕ್ಷ ಕೋಟಿ ಸಾಲ ಮಾಡಲು ನಿರ್ಧಾರ!

| Published : Feb 02 2024, 01:00 AM IST / Updated: Feb 02 2024, 08:20 AM IST

Nirmala Sitharaman
ಕೇಂದ್ರ ಬಜೆಟ್‌ 2024: ₹14.13 ಲಕ್ಷ ಕೋಟಿ ಸಾಲ ಮಾಡಲು ನಿರ್ಧಾರ!
Share this Article
  • FB
  • TW
  • Linkdin
  • Email

ಸಾರಾಂಶ

ವಿತ್ತೀಯ ಕೊರತೆಯನ್ನು ನೀಗಿಸುವ ಸಲುವಾಗಿ ಈ ಬಾರಿ ಒಟ್ಟು 14.13 ಲಕ್ಷ ಕೋಟಿ ರು. ಸಾಲ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಏ.1ರಿಂದ ಆರಂಭವಾಗುವ ಆರ್ಥಿಕ ವರ್ಷದಲ್ಲಿನ ವಿತ್ತೀಯ ಕೊರತೆಯನ್ನು ನೀಗಿಸಲು ಮಾರುಕಟ್ಟೆಯಿಂದ 14.13 ಲಕ್ಷ ಕೋಟಿ ರು. ಸಾಲ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. 

ಈ ಸಾಲದ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದ್ದು, ಕಳೆದ ವರ್ಷ 15.43 ಲಕ್ಷ ಕೋಟಿ ರು. ಸಾಲ ಮಾಡಲಾಗಿತ್ತು. ಇದು ಈವರೆಗಿನ ಅತಿ ಹೆಚ್ಚು ಸಾಲದ ಪ್ರಮಾಣವಾಗಿತ್ತು.

2024-25ರಲ್ಲಿ ತೆರಿಗೆ ಆದಾಯದ ಪ್ರಮಾಣವೂ ಹೆಚ್ಚಿರುವುದರಿಂದ ಸಾಲ ಮಾಡಬೇಕಾದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲಾಗಿದೆ. ಈ ಸಾಲಕ್ಕೆ ಮುಂದಿನ ವರ್ಷದಲ್ಲಿ ಸರ್ಕಾರ 2.37 ಕೋಟಿ ರು. ಮರುಪಾವತಿಯನ್ನು ಮಾಡಬೇಕಿದೆ. 

ಇದಲ್ಲದೇ 11.75 ಲಕ್ಷ ಕೋಟಿಯಷ್ಟು ನಿವ್ವಳ ಸಾಲ ಮಾಡಲು ಸಹ ನಿರ್ಧರಿಸಲಾಗಿದೆ. ಮುಂದಿನ ದಿನಾಂಕಗಳಲ್ಲಿ ಸೆಕ್ಯುರಿಟಿ ಬಾಂಡ್‌ಗಳನ್ನು ನೀಡುವ ಮೂಲಕ ಈ ಸಾಲವನ್ನು ಸರ್ಕಾರ ಮಾರುಕಟ್ಟೆಯಿಂದ ಪಡೆದುಕೊಳ್ಳುತ್ತದೆ.