ಸುರಂಗ ಕಾರ್ಮಿಕರ ಮನಸೋಲ್ಲಾಸಕ್ಕೆ ಇಸ್ಪೀಟ್‌, ಚೆಸ್‌ ರವಾನೆ ಸಿದ್ಧತೆ

| Published : Nov 25 2023, 01:15 AM IST

ಸುರಂಗ ಕಾರ್ಮಿಕರ ಮನಸೋಲ್ಲಾಸಕ್ಕೆ ಇಸ್ಪೀಟ್‌, ಚೆಸ್‌ ರವಾನೆ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಡಿ ಸಿಲುಕಿರುವ ಕಾರ್ಮಿಕರ ರಕ್ಷಣೆ ವಿಳಂಬಗೊಂಡಿರುವ ಹಿನ್ನೆಲೆಯಲ್ಲಿ ಅವರ ಒತ್ತಡ ನಿವಾರಣೆಗೆ ಹಲವು ಆಟದ ವಸ್ತುಗಳನ್ನು ಕಳುಹಿಸಲು ಮನೋವೈದ್ಯರ ತಂಡ ನಿರ್ಧರಿಸಿದೆ.

ಒತ್ತಡ ನಿವಾರಣೆಗೆ ಈಗ ಕಾರ್ಮಿಕರಿಂದ ಕಳ್ಳ-ಪೊಲೀಸ್‌ ಆಟ, ಯೋಗ

ಉತ್ತರಕಾಶಿ: ಸಿಲ್ಕ್ಯಾರಾ ಸುರಂಗದಡಿ ಸಿಲುಕಿರುವ ಕಾರ್ಮಿಕರ ರಕ್ಷಣೆ ವಿಳಂಬಗೊಂಡಿರುವ ಹಿನ್ನೆಲೆಯಲ್ಲಿ ಅವರ ಒತ್ತಡ ನಿವಾರಣೆಗೆ ಹಲವು ಆಟದ ವಸ್ತುಗಳನ್ನು ಕಳುಹಿಸಲು ಮನೋವೈದ್ಯರ ತಂಡ ನಿರ್ಧರಿಸಿದೆ.

ಕಾರ್ಮಿಕರ ಮಾನಸಿಕ ಸ್ಥೈರ್ಯವನ್ನು ಉತ್ತುಂಗದಲ್ಲಿಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೆಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಚಿಸಿದ ಹಿನ್ನೆಲೆಯಲ್ಲಿ ಮನೋವೈದ್ಯರು ಕಾರ್ಮಿಕರ ಒತ್ತಡ ನಿವಾರಣೆಗೆ ಲೂಡೋ, ಚೆಸ್‌ ಹಾಗೂ ಇಸ್ಪೀಟ್‌ ಆಟದ ವಸ್ತುಗಳನ್ನು ಕಳುಹಿಸಲು ನಿರ್ಧರಿಸಿದ್ದಾರೆ. ಇಲ್ಲಿಯವರೆಗೆ ಕಾರ್ಮಿಕರು ಒತ್ತಡ ನಿವಾರಣೆಗೆ ಯೋಗಾಭ್ಯಾಸ, ಕಳ್ಳ-ಪೊಲೀಸ್‌ ಆಟ ಹಾಗೂ ವ್ಯಾಯಾಮ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಇವರ ಜೊತೆಗೆ ಮನೋವೈದ್ಯರು ನಿರಂತರ ಸಂಪರ್ಕದಲ್ಲಿದ್ದು, ಉಭಯ ಕುಶಲೋಪರಿ ವಿಚಾರಿಸಿ ಧೈರ್ಯ ತುಂಬುತ್ತಿದ್ದಾರೆ.