ಸಾರಾಂಶ
ಎಫ್‌ಎಂಸಿಜಿ (ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು) ಉತ್ಪನ್ನಗಳ ಮೇಲಿನ ಜಿಎಸ್ಟಿ ಕಡಿತದ ಲಾಭವನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ದರ ಕಡಿತ ಮಾಡಿವೆಯೇ ಎಂಬುದರ ಮೇಲೆ ಕಣ್ಣು
ದರ ವ್ಯತ್ಯಾಸದ ವರದಿ ತರಿಸಿಕೊಳ್ಳುತ್ತಿರುವ ಕೇಂದ್ರನವದೆಹಲಿ: ಎಫ್‌ಎಂಸಿಜಿ (ತ್ವರಿತವಾಗಿ ಮಾರಾಟವಾಗುವ ಗ್ರಾಹಕ ಸರಕುಗಳು) ಉತ್ಪನ್ನಗಳ ಮೇಲಿನ ಜಿಎಸ್ಟಿ ಕಡಿತದ ಲಾಭವನ್ನು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಲು ಇದೀಗ ಕೇಂದ್ರ ಸರ್ಕಾರ ಮುಂದಾಗಿದೆ.
ಜಿಎಸ್ಟಿ ಕಡಿತವಾದರೂ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಎಫ್‌ಎಂಸಿಜಿ ವಸ್ತುಗಳ ದರ ಇಳಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ವಸ್ತುಗಳ ದರಗಳ ವ್ಯತ್ಯಾಸದ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಮುಂದಾಗಿದೆ.ನಾವು ವಸ್ತುಗಳ ಮೇಲಿನ ದರಗಳಲ್ಲಿನ ವ್ಯತ್ಯಾಸದ ಮೇಲೆ ಕಣ್ಣಿಟ್ಟಿದ್ದೇವೆ. ಸೆ.30ರೊಳಗೆ ಈ ಕುರಿತ ಪ್ರಾಥಮಿಕ ವರದಿ ತರಿಸಿಕೊಳ್ಳಲಿದ್ದೇವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಸೆ.22ರಿಂದಲೇ ಜಾರಿಗೆ ಬರುವಂತೆ 375ಕ್ಕೂ ಹೆಚ್ಚು ವಸ್ತುಗಳ ಮೇಲಿನ ಜಿಎಸ್ಟಿ ಕಡಿತ ಮಾಡಿದೆ. ಇದರ ಲಾಭವನ್ನು ಕಂಪನಿಗಳೇ ಪಡೆಯಲು ಮುಂದಾಗುವುದನ್ನು ತಡೆಯಲು ಯಾವುದೇ ವ್ಯವಸ್ಥೆ ಜಾರಿಗೆ ತರದಿದ್ದರೂ ಅನೇಕ ಕಂಪನಿಗಳು ಸ್ವಯಂ ಆಗಿ ದರಕಡಿತದ ಲಾಭ ಜನರಿಗೆ ತಲುಪಿಸುವುದಾಗಿ ಸ್ವಯಂ ಆಗಿ ಘೋಷಿಸಿವೆ.ಸೆ.9ರಂದೇ ಹಣಕಾಸು ಸಚಿವಾಲಯ ಕೇಂದ್ರ ಜಿಎಸ್ಟಿ ಫೀಲ್ಡ್ ಅಧಿಕಾರಿಗಳಿಗೆ ನಿತ್ಯ ಬಳಕೆಯ 54 ವಸ್ತುಗಳ ಮಾಸಿಕ ದರ ವ್ಯತ್ಯಾಸದ ಕುರಿತು ಮಾಹಿತಿ ಕೇಳಿತ್ತು. ಈ ಕುರಿತ ಮೊದಲ ವರದಿ ಸೆ.30ರಂದು ಸಚಿವಾಲಯದ ಕೈಸೇರುವ ನಿರೀಕ್ಷೆ ಇದೆ.