ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಬಿಜೆಪಿಯ ಕ್ಲೀನ್‌ಸ್ವೀಪ್ ಹ್ಯಾಟ್ರಿಕ್ ಕನಸು ಭಗ್ನವಾಗಿದೆ. ಆದರೆ, 25ರ ಪೈಕಿ 24 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದೆ. ಒಂದು ಸ್ಥಾನವನ್ನು ಕಾಂಗ್ರೆಸ್ ಗೆದ್ದಿದೆ.
ಬಿಜೆಪಿಯ ಘಟಾನುಘಟಿ ನಾಯಕರ ಪೈಕಿ ಅಮಿತ್ ಶಾ ಭರ್ಜರಿ 7 ಲಕ್ಷಕ್ಕೂ ಹೆಚ್ಚು ಮತಗಳಿಂದ ಗಾಂಧಿನಗರ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಇನ್ನಿಬ್ಬರು ಕೇಂದ್ರ ಸಚಿವರಾದ ಮನಸುಖ್ ಮಾಂಡವೀಯ ಹಾಗೂ ಪರಷೋತ್ತಮ ರೂಪಾಲಾ ಕೂಡ ಭಾರೀ ಅಂತರದಿಂದ ಜಯ ಗಳಿಸಿದ್ದಾರೆ.
2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗುಜರಾತ್‌ನಲ್ಲಿ 25ಕ್ಕೆ 25 ಸ್ಥಾನಗಳನ್ನೂ ಗೆದ್ದಿತ್ತು. ಈ ಬಾರಿ ಬನಾಸಕಾಂಠಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಜೆನಿಬೆನ್ ಠಾಕೋರ್ ಗೆದ್ದಿದ್ದಾರೆ. ಇನ್ನು, ಸೂರತ್ ಕ್ಷೇತ್ರದಲ್ಲಿ ಮತದಾನಕ್ಕೂ ಮೊದಲೇ ಬಿಜೆಪಿ ಗೆದ್ದಿತ್ತು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾಗಿತ್ತು. ಬೇರೆಲ್ಲ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದರು.
ಲೋಕಸಭೆ ಚುನಾವಣೆಯ ಜೊತೆಗೇ ಗುಜರಾತ್‌ನ 5 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಎಲ್ಲಾ ಸೀಟನ್ನೂ ಬಿಜೆಪಿ ಗೆದ್ದಿದೆ.
ಗೆದ್ದ ಪ್ರಮುಖರು: ಅಮಿತ್ ಶಾ, ಮನಸುಖ್ ಮಾಂಡವೀಯ, ಪರಷೋತ್ತಮ ರೂಪಾಲಾ