ಸಾರಾಂಶ
ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ.
ವಡೋದರಾ: ಗುಜರಾತ್‌ನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶಿ ಪ್ರಜೆಗಳ ಪೈಕಿ 250 ಜನರನ್ನು ಗುಜರಾತ್ ಸರ್ಕಾರ ಢಾಕಾಗೆ ಗಡೀಪಾರು ಮಾಡಿದೆ. ಕೇಂದ್ರ ಸರ್ಕಾರದ ಸಹಕಾರದೊಂದಿಗೆ ವಾಯುಪಡೆ ವಿಶೇಷ ವಿಮಾನದ ಮೂಲಕ ವಡೋದರ ವಾಯುನೆಲೆಯಿಂದ ಬಾಂಗ್ಲಾ ವಲಸಿಗರ ಕೈಗಳಿಗೆ ಕೋಳಹಾಕಿ ಢಾಕಾಗೆ ಇಳಿಸಲಾಗಿದೆ.
ಇದು ಅಕ್ರಮ ಬಾಂಗ್ಲಾ ನಿವಾಸಿಗಳ ವಿರುದ್ಧ ಗುಜರಾತ್ ಸರ್ಕಾರದ ಕಾರ್ಯಾಚರಣೆಯ ಭಾಗವಾಗಿದ್ದು, ಕಳೆದ ತಿಂಗಳು ಅಹಮದಾಬಾದ್‌ನಲ್ಲಿ 1200 ಅಕ್ರಮ ಬಾಂಗ್ಲಾ ವಲಸಿಗರ ಮನೆಗಳನ್ನು ಸರ್ಕಾರ ನೆಲೆಸಮ ಮಾಡಿತ್ತು. ಈ ಅದರ ಮುಂದುವರಿದ ಭಾಗವಾಗಿ ಅಕ್ರಮ ವಲಸಿಗರನ್ನು ಅವರ ರಾಷ್ಟ್ರಕ್ಕೆ ಗಡೀಪಾರು ಮಾಡಲಾಗಿದೆ.