ಬಿಲ್ಕಿಸ್‌ ಕೇಸು: ತನ್ನ ವಿರುದ್ಧದ ಟೀಕೆ ಕೈಬಿಡಲು ಸುಪ್ರೀಂಗೆ ಗುಜರಾತ್‌ ಸರ್ಕಾರ ಮನವಿ

| Published : Feb 14 2024, 02:22 AM IST / Updated: Feb 14 2024, 07:42 AM IST

ಬಿಲ್ಕಿಸ್‌ ಕೇಸು: ತನ್ನ ವಿರುದ್ಧದ ಟೀಕೆ ಕೈಬಿಡಲು ಸುಪ್ರೀಂಗೆ ಗುಜರಾತ್‌ ಸರ್ಕಾರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಬಿಲ್ಕಿಸ್‌ ಬಾನೊ ಗ್ಯಾಂಗ್‌ರೇಪ್‌ ಪ್ರಕರಣದ 11 ದೋಷಿಗಳ ಕ್ಷಮಾದಾನ ರದ್ದು ಮಾಡುವ ವೇಳೆ ಸುಪ್ರೀಂ ಕೋರ್ಟು, ತನ್ನ ಬಗ್ಗೆ ಮಾಡಿದ ಟೀಕೆಗಳನ್ನು ಕೈಬಿಡಬೇಕು ಎಂದು ಗುಜರಾತ್‌ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ.

ನವದೆಹಲಿ: ಇತ್ತೀಚೆಗೆ ಬಿಲ್ಕಿಸ್‌ ಬಾನೊ ಗ್ಯಾಂಗ್‌ರೇಪ್‌ ಪ್ರಕರಣದ 11 ದೋಷಿಗಳ ಕ್ಷಮಾದಾನ ರದ್ದು ಮಾಡುವ ವೇಳೆ ಸುಪ್ರೀಂ ಕೋರ್ಟು, ತನ್ನ ಬಗ್ಗೆ ಮಾಡಿದ ಟೀಕೆಗಳನ್ನು ಕೈಬಿಡಬೇಕು ಎಂದು ಗುಜರಾತ್‌ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದೆ. 

ಗುಜರಾತ್‌ ಸರ್ಕಾರ ಬೇಕೆಂದೇ ದೋಷಿಗಳ ಜತೆ ಶಾಮೀಲಾಗಿ ಅವರಿಗೆ ಕ್ಷಮಾದಾನ ನೀಡತ್ತು ಎಂದು ಸುಪ್ರೀಂ ಕೋರ್ಟು, ಹಿಗ್ಗಾಮುಗ್ಗಾ ಝಾಡಿಸಿತ್ತು. ಇದು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿತ್ತು.