ಗುಜರಾತ್‌ನ ಪಾಕ್‌ ಗಡಿಯಲ್ಲಿ ತೀವ್ರ ಉಷ್ಣಹವೆ ಹೊಡೆತದಿಂದ ಗಸ್ತು ತಿರುಗುತ್ತಿದ್ದ ಇಬ್ಬರು ಯೋಧರ ಸಾವು

| Published : Jul 21 2024, 01:29 AM IST / Updated: Jul 21 2024, 04:40 AM IST

ಸಾರಾಂಶ

ಉತ್ತರ ಭಾರತದಲ್ಲಿ ಮುಂಗಾರು ಪ್ರವೇಶವಾದರೂ ಬಿಸಿಲಿನ ತಾಪ ಕಡಿಮೆಯಾಗುತ್ತಿಲ್ಲ. ಗುಜರಾತಿನ ಪಾಕಿಸ್ತಾನ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ ಅಧಿಕಾರಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ತೀವ್ರ ಉಷ್ಣಹವೆ ಹೊಡೆತದಿಂದ ಸಾವನ್ನಪ್ಪಿದ್ದಾರೆ.

ಅಹಮದಾಬಾದ್‌: ಉತ್ತರ ಭಾರತದಲ್ಲಿ ಮುಂಗಾರು ಪ್ರವೇಶವಾದರೂ ಬಿಸಿಲಿನ ತಾಪ ಕಡಿಮೆಯಾಗುತ್ತಿಲ್ಲ. ಗುಜರಾತಿನ ಪಾಕಿಸ್ತಾನ ಗಡಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್‌ಎಫ್‌ ಅಧಿಕಾರಿ ಹಾಗೂ ಹೆಡ್‌ ಕಾನ್‌ಸ್ಟೇಬಲ್‌ ತೀವ್ರ ಉಷ್ಣಹವೆ ಹೊಡೆತದಿಂದ ಸಾವನ್ನಪ್ಪಿದ್ದಾರೆ.

ಸಹಾಯಕ ಕಮಾಂಡೆಂಟ್ ವಿಶ್ವ ದೇವು ಮತ್ತು ಹೆಡ್ ಕಾನ್‌ಸ್ಟೇಬಲ್‌ ದಯಾಲ್‌ ರಾಮ್ ಮೃತಪಟ್ಟವರು.

ಇಲ್ಲಿಯ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಮುಂಭಾಗದ ಹರಾಮಿ ನಾಲೆ ಪ್ರದೇಶದಲ್ಲಿ ಗಸ್ತು ತಿರುತ್ತಿದ್ದ ವೇಳೆ ವಿಶ್ವ ದೇವು ಹಾಗೂ ದಯಾಲ್‌ ರಾಮ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಅವರನ್ನು ಭುಜ್‌ನಲ್ಲಿರುವ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಆದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹರಾಮಿ ನಾಲೆ ಪ್ರದೇಶಗಳಲ್ಲಿ ಪ್ರಸ್ತುತ ತಾಪಮಾನವು 34-36 ಡಿಗ್ರಿಗಳಷ್ಟಿದ್ದು, ಆದ್ರತೆ ಮಟ್ಟವು ಶೇ.80-82 ರಷ್ಟಿದೆ.