ಸತ್ತ ಮೀನು ಪತ್ತೆ ಹಿನ್ನೆಲೆ: ಗ್ಯಾನವಾಪಿ ‘ಶಿವಲಿಂಗ’ ಕೊಳದಲ್ಲಿ ಸ್ವಚ್ಛತೆ

| Published : Jan 21 2024, 01:31 AM IST / Updated: Jan 21 2024, 02:43 PM IST

ಸತ್ತ ಮೀನು ಪತ್ತೆ ಹಿನ್ನೆಲೆ: ಗ್ಯಾನವಾಪಿ ‘ಶಿವಲಿಂಗ’ ಕೊಳದಲ್ಲಿ ಸ್ವಚ್ಛತೆ
Share this Article
  • FB
  • TW
  • Linkdin
  • Email

ಸಾರಾಂಶ

ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿರುವ ಗ್ಯಾನವಾಪಿ ಮಸೀದಿಯ ಕೊಳದಲ್ಲಿ ಶನಿವಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ವಾರಾಣಸಿ: ಸತ್ತ ಮೀನುಗಳು ಪತ್ತೆಯಾದ ಹಿನ್ನೆಲೆಯಲ್ಲಿ, ವಾರಾಣಸಿ ಗ್ಯಾನವಾಪಿ ಮಸೀದಿಯ ಶಿವಲಿಂಗ ರೂಪಿ ಆಕೃತಿ ಪತ್ತೆಯಾದ ಕೊಳದಲ್ಲಿ ಶನಿವಾರ ಸ್ವಚ್ಛತಾ ಕಾರ್ಯ ನಡೆಯಿತು.

ಸುಪ್ರೀಂ ಕೋರ್ಟ್‌ ಸೂಚನಾನುಸಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ನೇತೃತ್ವದಲ್ಲಿ ಸ್ವಚ್ಛತೆ ನಡೆಯಿತು. ಕೊಳದಲ್ಲಿದ್ದ ಸತ್ತ ಮೀನುಗಳನ್ನು ಪೌರಕಾರ್ಮಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಮಸೀದಿ ಸಮಿತಿ ತಿಳಿಸಿದೆ.ಇನ್ನು, ಈ ಕುರಿತು ಮಾಹಿತಿ ನೀಡಿದ ಹಿಂದು ಪರ ವಕಿಳ ಸುಧೀರ್‌ ತ್ರಿಪಾಠಿ, ‘ಎಲ್ಲ ಕಕ್ಷಿದಾರರು, ಪ್ರತಿವಾದಿಗಳು ಮತ್ತು ಜಿಲ್ಲಾ ನ್ಯಾಯಾಧೀಶರ ಸಮ್ಮುಖದಲ್ಲಿ ಮಸೀದಿಯ ಕೊಳದಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ಮೊದಲಿಗೆ ನೀರನ್ನು ಸಂಪೂರ್ಣ ಹೊರತೆಗೆದು, 26 ಪೌರ ಕಾರ್ಮಿಕರ ಗುಂಪು ಸ್ವಚ್ಛತಾ ಕಾರ್ಯವನ್ನು ಮಾಡಿತು’ ಎಂದರು.