ನಾನು ವಂಚನೆ ಮಾಡಿದ್ದರೆ ನೇಣಿಗೇರಿಸಿ: ಮೋದಿ

| Published : May 17 2024, 12:32 AM IST / Updated: May 17 2024, 06:24 AM IST

PM Modi
ನಾನು ವಂಚನೆ ಮಾಡಿದ್ದರೆ ನೇಣಿಗೇರಿಸಿ: ಮೋದಿ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಕ್ಕೆ ಸಂಪತ್ತು ಸೃಷ್ಟಿ ಮಾಡುವವರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ. ಒಂದು ವೇಳೆ ಅವರಿಗೆ ನಾನೇದರೂ ಅಪ್ರಾಮಾಣೀಕ ರೀತಿಯಲ್ಲಿ ಲಾಭ ಮಾಡಿಕೊಟ್ಟು ವಂಚನೆ ಎಸಗಿದ್ದರೆ ನೇಣಿಗೇರಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನವದೆಹಲಿ: ದೇಶಕ್ಕೆ ಸಂಪತ್ತು ಸೃಷ್ಟಿ ಮಾಡುವವರ ಪರವಾಗಿ ನಾನು ದೃಢವಾಗಿ ನಿಲ್ಲುತ್ತೇನೆ. ಒಂದು ವೇಳೆ ಅವರಿಗೆ ನಾನೇದರೂ ಅಪ್ರಾಮಾಣೀಕ ರೀತಿಯಲ್ಲಿ ಲಾಭ ಮಾಡಿಕೊಟ್ಟು ವಂಚನೆ ಎಸಗಿದ್ದರೆ ನೇಣಿಗೇರಲು ಸಿದ್ಧ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಇಂಡಿಯಾ ಟುಡೇ’ ಸುದ್ದಿವಾಹಿನಿಗೆ ನೀಡಿದ ಸಂದರ್ಶನ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆಯ್ದ ಉದ್ಯಮಿಗಳಿಗೆ ಮೋದಿ ಲಾಭ ಮಾಡಿಕೊಟ್ಟಿದ್ದಾರೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ‘ಹಿಂದೆ ನೆಹರೂ ಜೀ ಕೂಡಾ ಸಂಸತ್ತಿನಲ್ಲಿ ಬಿರ್ಲಾ- ಟಾಟಾ ಕೀ ಸರ್ಕಾರ್‌ ಎಂಬ ನಿಂದನೆ ಎದುರಿಸಬೇಕಾಗಿ ಬಂದಿತ್ತು. 

ಇದೀಗ ಗಾಂಧೀ ಕುಟುಂಬ ನಾನು ಕೂಡಾ ಅದೇ ರೀತಿಯ ನಿಂದನೆ ಎದುರಿಸಬೇಕು ಎಂದು ಬಯಸುತ್ತಿದೆ. ದೇಶಕ್ಕೆ ಸಂಪತ್ತು ಸೃಷ್ಟಿಸುವವರಿಗೆ ಗೌರವ ನೀಡಬೇಕು ಎಂದು ಹೇಳಲು ನನಗೇನೂ ನಾಚಿಕೆ ಇಲ್ಲ. ನಾವು ಸಾಧಕರ ಮೌಲ್ಯಗಳನ್ನು ಗೌರವಿಸದೇ ಹೋದಲ್ಲಿ ಯಾರು ವಿಜ್ಞಾನಿಗಳಾಗುತ್ತಾರೆ? ಯಾರು ಪಿಎಚ್‌ಡಿ ಪಡೆಯಲು ಮುಂದಾಗುತ್ತಾರೆ. ಸಮಾಜದ ಎಲ್ಲಾ ವಲಯಗಳ ಸಾಧಕರನ್ನೂ ನಾವು ಗೌರವಿಸಬೇಕು’ಎಂದು ಹೇಳಿದರು.