ಕೆಲಸಕ್ಕೆ ಲೇಟಾಗಿ ಬಂದಿದ್ದಕ್ಕೆ ಬೆತ್ತಲೆ ಮಾಡಿ ಮುಟ್ಟು ಪರೀಕ್ಷಿಸಿದ ಪುರುಷ

| N/A | Published : Oct 31 2025, 03:30 AM IST

 woman periods

ಸಾರಾಂಶ

ರಾಜ್ಯಪಾಲರು ವಿವಿ ಕಾರ್ಯಕ್ರಮಕ್ಕೆ ಬರುವ ದಿನವೇ ಮಹಿಳಾ ಸ್ವಚ್ಚತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.

 ರೊಹ್ಟಕ್‌: ರಾಜ್ಯಪಾಲರು ವಿವಿ ಕಾರ್ಯಕ್ರಮಕ್ಕೆ ಬರುವ ದಿನವೇ ಮಹಿಳಾ ಸ್ವಚ್ಚತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ.

ಅ.26ರಂದು ರಾಜ್ಯಪಾಲ ಅಸೀಮ್‌ ಕುಮಾರ್‌ ಘೋಷ್‌ 3 ದಿನಗಳ ಭೇಟಿಗಾಗಿ ಮಹರ್ಷಿ ದಯಾನಂದ್‌ ವಿವಿಗೆ ಆಗಮಿಸಿದ್ದರು. ಅದೇ ದಿನದಂದು ಕೆಲ ಮಹಿಳಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದಿದ್ದಾರೆ. ತಾವು ಮುಟ್ಟಾಗಿದ್ದ ಕಾರಣ ಕೆಲಸಕ್ಕೆ ತಡವಾಯಿತು ಎಂದು ಕಾರಣ ಕೊಟ್ಟಿದ್ದಾರೆ.

ಸ್ಯಾನಿಟರಿ ಪ್ಯಾಡ್‌ಗಳ ಫೋಟೋ

ಇದನ್ನು ಹಾಗೆಯೇ ಒಪ್ಪದ ವಿಚಾರಕ, ಬೇರೆ ಮಹಿಳೆಯರಿಂದ ಹೆಂಗಸರ ವಸ್ತ್ರ ತೆಗೆಸಿ, ಅವರು ನಿಜವಾಗಿಯೂ ಮುಟ್ಟಾಗಿದ್ದಾರೆಯೇ ಎಂದು ಪರೀಕ್ಷೆ ನಡೆಸಿದ್ದಾನೆ. ಜೊತೆಗೆ ಸ್ಯಾನಿಟರಿ ಪ್ಯಾಡ್‌ಗಳ ಫೋಟೋ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಮೇಲ್ವಿಚಾರಕ ವಶಕ್ಕೆ:

ಘಟನೆಯಿಂದ ತೀವ್ರ ಅವಮಾನಿತರಾದ ಸಂತ್ರಸ್ತರು ಮೇಲ್ವಿಚಾರಕನ ವಿರುದ್ಧ ವಿವಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮೇಲ್ವಿಚಾರಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Read more Articles on