ಸಾರಾಂಶ
ಹರ್ಯಾಣದ ಝಜ್ಜರ್ ಜಿಲ್ಲೆಯ ಅಪಾರ್ಟ್ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಗ್ರಾವಿತ್ (25) ಮತ್ತು ನಂದಿನಿ (22) ಯೂಟ್ಯೂಬರ್‌ಗಳಾಗಿದ್ದರು
ಬಹದ್ದೂರ್‌ಗಢ: ಹರ್ಯಾಣದ ಝಜ್ಜರ್ ಜಿಲ್ಲೆಯ ಅಪಾರ್ಟ್ಮೆಂಟ್‌ನ ಏಳನೇ ಮಹಡಿಯಿಂದ ಜಿಗಿದು ಯೂಟ್ಯೂಬರ್ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಗ್ರಾವಿತ್ (25) ಮತ್ತು ನಂದಿನಿ (22) ಯೂಟ್ಯೂಬರ್‌ಗಳಾಗಿದ್ದರು.
ಅವರು ಯೂಟ್ಯೂಬ್ ನಿರ್ವಹಣೆ ಮತ್ತು ಕಿರುಚಿತ್ರ ರಚಿಸುವ ಕೆಲಸ ಮಾಡುತ್ತಿದ್ದರು. ಉತ್ತರಾಖಂಡದ ಡೆಹ್ರಾಡೂನ್‌ನಿಂದ ಬಂದು ಬಹದ್ದೂರ್‌ಗಢದ ವಸತಿ ಕಟ್ಟಡದಲ್ಲಿ ಒಂದು ತಿಂಗಳಿನಿಂದ ವಾಸವಿದ್ದರು.
ಚಿತ್ರೀಕರಣದಿಂದ ತಡರಾತ್ರಿ ಮನೆಗೆ ಹಿಂದಿರುಗಿದ ನಂತರ ಜಗಳವಾಡಿದ್ದರು. ಬಳಿಕ ಇಬ್ಬರೂ ಅಪಾರ್ಟ್ಮೆಂಟ್‌ನ 7ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.