ಭಾರತದಿಂದ ಬಾಂಗ್ಲಾದೇಶದ ರಾಜಕೀಯದ ಬಗ್ಗೆ ಮಾಜಿ ಪ್ರಧಾನಿ ಶೇಖ್‌ ಹಸೀನಾ ಹೇಳಿಕೆ: ಸಲಹೆಗಾರ ಆಕ್ಷೇಪ

| Published : Sep 06 2024, 01:03 AM IST / Updated: Sep 06 2024, 04:31 AM IST

Sheikh haseena
ಭಾರತದಿಂದ ಬಾಂಗ್ಲಾದೇಶದ ರಾಜಕೀಯದ ಬಗ್ಗೆ ಮಾಜಿ ಪ್ರಧಾನಿ ಶೇಖ್‌ ಹಸೀನಾ ಹೇಳಿಕೆ: ಸಲಹೆಗಾರ ಆಕ್ಷೇಪ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಭಾರತದಿಂದ ಬಾಂಗ್ಲಾದೇಶದ ರಾಜಕೀಯದ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದು ಬಾಂಗ್ಲಾದೇಶದ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ಢಾಕಾ: ಭಾರತದಲ್ಲಿ ಕುಳಿತುಕೊಂಡು ಮಾಜಿ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದೇಶದಲ್ಲಿ ರಾಜಕೀಯ ಹೇಳಿಕೆ ನೀಡುವುದು ಸ್ನೇಹಮಯಿ ವರ್ತನೆಯಲ್ಲ. ನಾವು ಭಾರತದ ಎದುರು ಗಡೀಪಾರು ಬೇಡಿಕೆ ಇಡುವವರೆಗೂ ಹಸೀನಾ ಅವರು ಮೌನವಾಗಿರಬೇಕು. ತನ್ಮೂಲಕ ಎರಡೂ ದೇಶಗಳಿಗೆ ಇರುಸುಮುರುಸಾಗುವುದನ್ನು ತಡೆಯಬೇಕು ಎಂದು ಬಾಂಗ್ಲಾದೇಶದ ನೂತನ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್‌ ಯೂನಸ್‌ ಅವರು ಸಲಹೆ ಮಾಡಿದ್ದಾರೆ.

ಹಸೀನಾ ಭಾರತದಲ್ಲಿದ್ದುಕೊಂಡು ಕೆಲವು ಬಾರಿ ಮಾತನಾಡುತ್ತಿದ್ದಾರೆ. ಇದು ಸಮಸ್ಯೆಗೆ ಕಾರಣವಾಗುತ್ತಿದೆ. ಆಕೆ ಮೌನದಿಂದ ಇದ್ದರೆ, ಒಳ್ಳೆಯದು. ಭಾರತದಲ್ಲಿ ಕುಳಿತು ಮಾತನಾಡುವುದು, ನಿರ್ದೇಶನಗಳನ್ನು ನೀಡುವುದನ್ನು ಯಾರೂ ಇಷ್ಟಪಡುವುದಿಲ್ಲ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆ.15ರಂದು ಬಾಂಗ್ಲಾ ತೊರೆದ ಹಸೀನಾ ಅವರು ಆ.13ರಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಕೆಲವರು ಭಯೋತ್ಪಾದಕ ದಾಳಿ ನಡೆಸಿದ್ದಾರೆ. ಅವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದ್ದರು.