ಇನ್ನೂ ಕೆಲ ದಿನ ಹಸೀನಾ ಭಾರತದಲ್ಲೇ ವಾಸ ಸಂಭವ

| Published : Aug 07 2024, 01:03 AM IST

ಸಾರಾಂಶ

ಲಂಡನ್‌ಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಕೆಲ ಅನಿಶ್ಚಿತತೆಗಳ ಕಾರಣ ಮುಂದಿನ ಕೆಲ ಕಾಲ ಭಾರತದಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.

ನವದೆಹಲಿ: ಲಂಡನ್‌ಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದ ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಕೆಲ ಅನಿಶ್ಚಿತತೆಗಳ ಕಾರಣ ಮುಂದಿನ ಕೆಲ ಕಾಲ ಭಾರತದಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗಿದೆ.ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸಹೋದರಿ ರೆಹಾನಾರೊಂದಿಗೆ ಭಾರತಕ್ಕೆ ಬಂದಿರುವ ಹಸೀನಾ ಲಂಡನ್‌ ಹೋಗುತ್ತಾರೆಂದು ಹೇಳಲಾಗಿತ್ತಾದರೂ ಆ ಪ್ರಕ್ರಿಯೆಯಲ್ಲಿ ಕೆಲ ಅಡಚಣೆಗಳು ಉಂಟಾಗಿವೆ. ತನ್ನ ದೇಶದಲ್ಲಿ ವಿಪರೀತ ವಿರೋಧ ಎದುರಿಸುತ್ತಿರುವ ಅವರಿಗೆ ತಾತ್ಕಾಲಿಕ ಆಶ್ರಯ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ರೆಹಾನಾರ ಪುತ್ರಿ ಟುಲಿಪ್‌ ಸಿದ್ದಿಕಿ ಬ್ರಿಟಿಷ್ ಸಂಸತ್ತಿನಲ್ಲಿ ಆರ್ಥಿಕ ಕಾರ್ಯದರ್ಶಿಯಾಗಿರುವ ಕಾರಣ ಅಲ್ಲಿಗೇ ಹೋಗಲು ನಿರ್ಧರಿಸಿದ್ದ ಹಸೀನಾ, ಈ ಬಗ್ಗೆ ಭಾರತಕ್ಕೆ ಮೊದಲೇ ತಿಳಿಸಿದ್ದು, ತಮ್ಮ ಮುಂದಿನ ನಡೆಯ ಬಗ್ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.