ಇತರ ಚ್ಯವನಪ್ರಾಶಗಳ ಟೀಕಿಸಕೂಡದು: ಪತಂಜಲಿಗೆ ಕೋರ್ಟ್‌ ಆದೇಶ

| Published : Nov 12 2025, 02:00 AM IST

ಇತರ ಚ್ಯವನಪ್ರಾಶಗಳ ಟೀಕಿಸಕೂಡದು: ಪತಂಜಲಿಗೆ ಕೋರ್ಟ್‌ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

‘ಯೋಗ ಗುರು ಬಾಬಾ ರಾಮ್‌ದೇವ್‌ ಅವರ ಒಡೆತನದ ಪತಂಜಲಿಯ ಚ್ಯವನ್‌ಪ್ರಾಶ್‌ ಜಾಹೀತಾತು ಅವಹೇಳನಕಾರಿಯಾಗಿದೆ. ಅದು ಇತರ ಚ್ಯವನಪ್ರಾಶಗಳನ್ನು ಧೋಖಾ ಎಂದು ಕರೆದ ಜಾಹೀರಾತನ್ನು 3 ದಿನಗಳ ಒಳಗಾಗಿ ಎಲ್ಲ ಮಾಧ್ಯಮಗಳಿಂದ ತೆಗೆಯಬೇಕು’ ಎಂದು ದೆಹಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ನವದೆಹಲಿ: ‘ಯೋಗ ಗುರು ಬಾಬಾ ರಾಮ್‌ದೇವ್‌ ಅವರ ಒಡೆತನದ ಪತಂಜಲಿಯ ಚ್ಯವನ್‌ಪ್ರಾಶ್‌ ಜಾಹೀತಾತು ಅವಹೇಳನಕಾರಿಯಾಗಿದೆ. ಅದು ಇತರ ಚ್ಯವನಪ್ರಾಶಗಳನ್ನು ಧೋಖಾ ಎಂದು ಕರೆದ ಜಾಹೀರಾತನ್ನು 3 ದಿನಗಳ ಒಳಗಾಗಿ ಎಲ್ಲ ಮಾಧ್ಯಮಗಳಿಂದ ತೆಗೆಯಬೇಕು’ ಎಂದು ದೆಹಲಿ ಹೈಕೋರ್ಟ್‌ ಆದೇಶ ಹೊರಡಿಸಿದೆ.

ಜಾಹೀರಾತಿನಲ್ಲಿ ಮಿಕ್ಕ ಚ್ಯವನ್‌ಪ್ರಾಶ್‌ಗಳು ‘ಮೋಸ’. ಕೇವಲ ಪತಂಜಲಿಯದ್ದು ಸರಿ ಎಂದು ಚಿತ್ರಿಸಲಾಗಿತ್ತು. ಈ ಜಾಹೀತಾರಿನ ವಿರುದ್ಧ ಡಾಬರ್‌ ಇಂಡಿಯಾ ಕಂಪನಿಯು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಇದನ್ನು ಪರಿಗಣಿಸಿರುವ ಪೀಠ, ‘ಇದು ಕೇವಲ ಒಂದು ಬ್ರ್ಯಾಂಡ್‌ಗಷ್ಟೇ ಅಲ್ಲದೇ ಚ್ಯವನ್‌ಪ್ರಾಶ ಎಂಬ ಅಂಶಕ್ಕೆ ಅವಮಾನಕಾರಿಯಾಗಿದೆ. ಅನ್ಯ ಚ್ಯವನ್‌ಪ್ರಾಶ ಮಾರುಕಟ್ಟೆಗೆ ಬಿಡಲು ಯೋಗ್ಯ ಎಂದು ಆಡಳಿತ ಅನುಮತಿ ಕೊಟ್ಟ ಬಳಿಕ ಈ ರೀತಿಯ ಚಿತ್ರಿಸುವಿಕೆ ತಪ್ಪು. ಹೀಗಾಗಿ 3 ದಿನಗಳ ಒಳಗಾಗಿ ಎಲ್ಲ ವಿಧದ ಮಾಧ್ಯಮಗಳಿಂದ ಜಾಹೀರಾತು ಹಿಂತೆಗೆಯಬೇಕು’ ಎಂದು ಪೀಠ ಆದೇಶಿಸಿದೆ.