ಸಾರಾಂಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 3 ತಾಸು ನಿದ್ದೆ ಮಾಡುತ್ತಾರೆ. ಇದನ್ನು ಕೇಳಿ ನನಗೆ ಅಚ್ಚರಿಯಾಯಿತು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ ಕೇವಲ 3 ತಾಸು ನಿದ್ದೆ ಮಾಡುತ್ತಾರೆ. ಇದನ್ನು ಕೇಳಿ ನನಗೆ ಅಚ್ಚರಿಯಾಯಿತು ಎಂದು ಬಾಲಿವುಡ್ ನಟ ಸೈಫ್ ಅಲಿ ಖಾನ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ರಾಜ್ ಕಪೂರ್ ಫಿಲಂ ಫೆಸ್ಟಿವಲ್‌ಗೆ ಮೋದಿಯವರನ್ನು ಆಹ್ವಾನಿಸಲು ಅವರ ನಿವಾಸಕ್ಕೆ ತೆರಳಿದ್ದಾಗ ಆದ ಭೇಟಿಯ ಬಗ್ಗೆ ಮಾಧ್ಯಮಗಳ ಜತೆ ಮಾತನಾಡಿದ ಸೈಫ್, ‘ಪ್ರಧಾನಿ ಮೋದಿ ನಾವು ಅವರನ್ನು ಭೇಟಿಯಾದಾಗ ಸಂಸತ್ತಿನಿಂದ ಆಗಮಿಸಿದರ. ಅಲ್ಲಿಂದ ನೇರವಾಗಿ ನಮ್ಮ ಭೇಟಿಗೆ ಬಂದಿದ್ದರಿಂದ ದಣಿದಿರುತ್ತಾರೆ ಎಂದುಕೊಂಡಿದ್ದೆ. ಆದರೆ ಅವರು ನಗುಮೊಗದಿಂದ ಮಾತಾಡಿದರು. ಅವರ ವಿಶ್ರಾಂತಿಯ ಬಗ್ಗೆ ವಿಚಾರಿಸಿದಾಗ, ಮೋದಿ ರಾತ್ರಿ ಕೇವಲ 3 ತಾಸು ನಿದ್ದೆ ಮಾಡುತ್ತಾರೆ ಎಂದು ತಿಳಿಯಿತು’ ಎಂದು ಹೇಳಿದರು.ಈ ಹಿಂದೆಯೂ ಸಚಿವ, ಬಿಜೆಪಿಗರಿಂದ ಹೇಳಿಕೆ:
ಈ ಮುಂಚೆ ಮೋದಿಯವರ ವಿಶ್ರಾಂತಿಯ ಬಗ್ಗೆ ಮಾತನಾಡಿದ್ದ ಕೇಂದ್ರ ಸಚಿವ ಎಲ್. ಮುರುಗನ್, ‘ಮೋದಿಯವರಿಂದ ಹಲವು ಸ್ಫೂರ್ತಿದಾಯಕ ವಿಚಾರಗಳನ್ನು ಕಲಿತೆ. ಅವರು ಕೇವಲ 3.5 ತಾಸು ಮಲಗುತ್ತಾರೆ ಹಾಗೂ ಸಂಜೆ 6 ಗಂಟೆಯ ಬಳಿಕ ಏನನ್ನೂ ತಿನ್ನುವುದಿಲ್ಲ’ ಎಂದಿದ್ದರು.ಅಂತೆಯೇ, ಮಹಾರಾಷ್ಟ್ರದ ಬಿಜೆಪಿ ನಾಯಕ ಚಂದ್ರಕಾಂತ್ ಪಾಟಿಲ್ ಕೂಡ, ‘ದಿನಕ್ಕೆ 2 ತಾಸು ಮಾತ್ರ ಮಲಗುವ ಮೋದಿ ಈಗ 24 ಗಂಟೆಯೂ ಎಚ್ಚರವಿದ್ದು ದೇಶಕ್ಕಾಗಿ ದುಡಿಯುವ ಪ್ರಯೋಗ ನಡೆಸುತ್ತಿದ್ದಾರೆ’ ಎಂದಿದ್ದರು.