ಮಕ್ಕಳ ಪೌಷ್ಠಿಕಾಂಶ ಆಹಾರ ಮಾರುಕಟ್ಟೆಯಲ್ಲಿ ವಿಶ್ವದ ಮುಂಚೂಣಿ ಕಂಪನಿಗಳ ಪೈಕಿ ಒಂದಾದ ನೆಸ್ಲೆಯ ಕೆಲ ಮಕ್ಕಳ ಆಹಾರ ಉತ್ಪನ್ನದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 25 ದೇಶಗಳಲ್ಲಿ ಮಾರುಕಟ್ಟೆಗೆ ವಿತರಣೆ ಮಾಡಿದ್ದ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ಕಂಪನಿ ನಿರ್ಧರಿಸಿದೆ.
ಲಂಡನ್: ಮಕ್ಕಳ ಪೌಷ್ಠಿಕಾಂಶ ಆಹಾರ ಮಾರುಕಟ್ಟೆಯಲ್ಲಿ ವಿಶ್ವದ ಮುಂಚೂಣಿ ಕಂಪನಿಗಳ ಪೈಕಿ ಒಂದಾದ ನೆಸ್ಲೆಯ ಕೆಲ ಮಕ್ಕಳ ಆಹಾರ ಉತ್ಪನ್ನದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ 25 ದೇಶಗಳಲ್ಲಿ ಮಾರುಕಟ್ಟೆಗೆ ವಿತರಣೆ ಮಾಡಿದ್ದ ಉತ್ಪನ್ನಗಳನ್ನು ಹಿಂದಕ್ಕೆ ಪಡೆಯಲು ಕಂಪನಿ ನಿರ್ಧರಿಸಿದೆ. ಈ ದೇಶಗಳ ಪಟ್ಟಿಯಲ್ಲಿ ಭಾರತ ಇದೆಯೇ ಎಂಬುದರ ಬಗ್ಗೆ ಕಂಪನಿ ಯಾವುದೇ ಮಾಹಿತಿ ನೀಡಿಲ್ಲ.
ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬುಹುದಾದ ಅಂಶ
ಮಕ್ಕಳಿಗೆ ಕೊಡುವ ಉತ್ಪನ್ನಗಳಲ್ಲಿ ವಾಕರಿಕೆ ಮತ್ತು ವಾಂತಿಗೆ ಕಾರಣವಾಗಬುಹುದಾದ ಅಂಶಗಳು ಮಿಶ್ರಣವಾಗಿವೆ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಕಂಪನಿ ಈ ಕ್ರಮಕ್ಕೆ ಮುಂದಾಗಿದೆ.
ನೆಸ್ಲೆ ಹೇಳಿಕೆ ಬಿಡುಗಡೆ
ಈ ಕುರಿತು ನೆಸ್ಲೆ ಹೇಳಿಕೆ ಬಿಡುಗಡೆ ಮಾಡಿದ್ದು, ‘ಅರಾಚಿನೋಡಿಕ್ ಆ್ಯಸಿಡ್ ಆಯಿಲ್ ಮತ್ತು ಇತರೆ ತೈಲ ಮಿಶ್ರಣಗಳನ್ನು ಪರೀಕ್ಷೆ ನಡೆಸಿದಾಗ, ಅನಾರೋಗ್ಯಕರ ಅಂಶ ಪತ್ತೆಯಾಗಿದೆ. ನೆದರ್ಲೆಂಡ್ಸ್‌ನಲ್ಲಿನ ಕಾರ್ಖಾನೆಯಲ್ಲಿ ಕಂಡು ಬಂದಿದ್ದು, ಉತ್ಪನ್ನಗಳನ್ನು ಹಿಂಪಡೆದುಕೊಳ್ಳಲಾಗಿದೆ’ ಎಂದು ತಿಳಿಸಿದೆ.