ವೇಲ್, ಹಿಜಾಬ್, ನಿಕಾಬ್, ಹೆಲ್ಮೆಟ್‌ ಸೇರಿದಂತೆ ಮುಖಕ್ಕೆ ಯಾವುದೇ ರೀತಿಯ ಮುಸುಕನ್ನು ಧರಿಸಿ ಬರುವವರಿಗೆ ಬಿಹಾರದ ಚಿನ್ನದ ವರ್ತಕರು ಅಂಗಡಿ ಪ್ರವೇಶ ಮತ್ತು ವ್ಯಾಪಾರವನ್ನು ನಿಷೇಧಿಸಿದ್ದಾರೆ.

ಪಟನಾ: ಹಿಜಾಬ್, ನಿಕಾಬ್‌ ಧರಿಸಿ ಗ್ರಾಹಕರ ನೆಪದಲ್ಲಿ ಚಿನ್ನದಂಗಡಿಗಳಿಗೆ ಬರುವ ವಂಚಕಿಯರು ಆಭರಣಗಳನ್ನು ಕಳವು ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವೇಲ್, ಹಿಜಾಬ್, ನಿಕಾಬ್, ಹೆಲ್ಮೆಟ್‌ ಸೇರಿದಂತೆ ಮುಖಕ್ಕೆ ಯಾವುದೇ ರೀತಿಯ ಮುಸುಕನ್ನು ಧರಿಸಿ ಬರುವವರಿಗೆ ಬಿಹಾರದ ಚಿನ್ನದ ವರ್ತಕರು ಅಂಗಡಿ ಪ್ರವೇಶ ಮತ್ತು ವ್ಯಾಪಾರವನ್ನು ನಿಷೇಧಿಸಿದ್ದಾರೆ. ಅಖಿಲ ಭಾರತ ಆಭರಣ ವ್ಯಾಪಾರಿಗಳು ಮತ್ತು ಚಿನ್ನದ ಒಕ್ಕೂಟದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಮಾಹಿತಿ ನೀಡಿದ ಒಕ್ಕೂಟದ ರಾಜ್ಯಾಧ್ಯಕ್ಷ

ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಅಶೋಕ್ ಕುಮಾರ್ ವರ್ಮಾ, ‘ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಹಿಜಾಬ್, ನಿಕಾಬ್‌ನಿಂದ ಮುಖವನ್ನು ಮುಚ್ಚಿಕೊಂಡು ಬರುವ 3-4 ಮಹಿಳೆಯರ ಗುಂಪು ಚಿನ್ನ ದರೋಡೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇವುಗಳನ್ನು ತಡೆಗಟ್ಟುವ ಉದ್ದೇಶದಿಂದ, ಮುಸುಕು ತೆಗೆದು ಮುಖ ತೋರಿಸಿದವರ ಜೊತೆ ಮಾತ್ರ ವ್ಯಾಪಾರ ಮಾಡಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ಉತ್ತರ ಪ್ರದೇಶದ ಝಾನ್ಸಿಯ ಚಿನ್ನದ ವ್ಯಾಪಾರಿಗಳು ಕೂಡ ಇದೇ ನಿರ್ಧಾರ

ಇತ್ತೀಚೆಗೆ ಉತ್ತರ ಪ್ರದೇಶದ ಝಾನ್ಸಿಯ ಚಿನ್ನದ ವ್ಯಾಪಾರಿಗಳು ಕೂಡ ಇದೇ ನಿರ್ಧಾರ ತೆಗೆದುಕೊಂಡಿದ್ದರು.