ಸಾರಾಂಶ
ರಾಮಮಂದಿರದಲ್ಲಿ ಹೇಮಾಮಾಲಿನಿ ತಂಡದಿಂದ ಶುಕ್ರವಾರದಿಂದ 45 ದಿನಗಳ ಕಾಲ ಭಕ್ತಿ ಸಂಗೀತ ರಾಗ ಉತ್ಸವ ಸೇವೆ ಸಲ್ಲಿಸಲಿದ್ದಾರೆ.
ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ 45 ದಿನಗಳ ‘ಶ್ರೀ ರಾಮ ರಾಗ ಸೇವೆ’ ಕಾರ್ಯಕ್ರಮವನ್ನು ಮಂದಿರದ ಆಡಳಿತ ಮಂಡಳಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಶುಕ್ರವಾರದಿಂದ ಆರಂಭಿಸಿದೆ.
ಇದರಲ್ಲಿ ಬಾಲಿವುಡ್ ನಟಿ ಹೇಮಾ ಮಾಲಿನಿ, ಮಾಲಿನಿ ಅವಸ್ಥಿ, ಅನೂಪ್ ಜಲೋಟಾ, ಅನುರಾಧಾ ಪೌಡ್ವಾಲ್, ಸೋನಾಲ್ ಮಾನ್‌ಸಿಂಗ್ ಸೇರಿ ದೇಶಾದ್ಯಂತ ಸುಮಾರು 100 ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.
ಭಗವಂತ ರಾಮನ ಕುರಿತ ಈ ಭಕ್ತಿಯ ಸಂಗೀತ ಉತ್ಸವವು ಮಾರ್ಚ್ 10 ರಂದು ಕೊನೆಗೊಳ್ಳಲಿದೆ.
‘ಈ ಶಾಸ್ತ್ರೀಯ ಸಂಪ್ರದಾಯವಾದ ರಾಗ ಸೇವೆ ಉತ್ಸವವನ್ನು ಮಂದಿರದ ಮಂದಿರದ ಗುಡಿ ಮಂಟಪದಲ್ಲಿ ಆಯೋಜಿಸಲಾಗಿದೆ’ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ಹೇಳಿದ್ದಾರೆ.
ಜ.22 ರಂದು ಮಂದಿರದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆಯಾಗಿತ್ತು.