ಮೊದಲ ಬಾರಿಗೆ ಮೋದಿ ಮಿತ್ರರ ಮರ್ಜಿಗೆ: ಪಾಶ್ಚಾತ್ಯ ಮಾಧ್ಯಮ

| Published : Jun 11 2024, 01:31 AM IST / Updated: Jun 11 2024, 10:20 AM IST

PM Modi
ಮೊದಲ ಬಾರಿಗೆ ಮೋದಿ ಮಿತ್ರರ ಮರ್ಜಿಗೆ: ಪಾಶ್ಚಾತ್ಯ ಮಾಧ್ಯಮ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಸಂಜೆ ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯ ಕುರಿತು ಪಾಶ್ಚಾತ್ಯ ಸುದ್ದಿಸಂಸ್ಥೆಗಳು ತರಹೇವಾರಿ ಸುದ್ದಿ ಪ್ರಕಟಿಸಿ ವೆ.

ನವದೆಹಲಿ: ಭಾನುವಾರ ಸಂಜೆ ಭಾರತದ ಪ್ರಧಾನಿಯಾಗಿ ಸತತ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯ ಕುರಿತು ಪಾಶ್ಚಾತ್ಯ ಸುದ್ದಿಸಂಸ್ಥೆಗಳು ತರಹೇವಾರಿ ಸುದ್ದಿ ಪ್ರಕಟಿಸಿದ್ದು, ಬಹುತೇಕ ಮಾಧ್ಯಮಗಳು ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಮಿತ್ರಪಕ್ಷಗಳ ಮರ್ಜಿಗೆ ಒಳಗಾಗಿ ಪ್ರಮಾಣ ಸ್ವೀಕರಿಸಿದ್ದು ಕಂಡಿದ್ದಾಗಿ ಉಲ್ಲೇಖಿಸಿವೆ.

ದಿ ನ್ಯೂಯಾರ್ಕ್‌ ಟೈಮ್ಸ್‌:

ಅಮೆರಿಕದ ಸುದ್ದಿಪತ್ರಿಕೆಯು ಪ್ರಮಾಣವಚನದ ದಿನ ದೆಹಲಿಯಲ್ಲಿ ರಾಜಕೀಯ ಅಲೆ ತಿರುಗಿದೆ. ನರೇಂದ್ರ ಮೋದಿಗೆ 10 ವರ್ಷಗಳ ಬಳಿಕ ಬಹುಮತ ಸಿಗದ ಕಾರಣ ಮಿತ್ರಪಕ್ಷಗಳ ಮೇಲೆ ಅವಲಂಬಿತರಾಗಿ ಪ್ರಮಾಣದಲ್ಲಿ ತುಸು ಹೆಚ್ಚಾಗಿ ಕಾಣಿಸಿಕೊಂಡರು ಎಂದು ಬಣ್ಣಿಸಿದೆ. 

ಬಿಬಿಸಿ:

ಪ್ರಮಾಣವಚನ ಸಮಾರಂಭದಲ್ಲಿ ಯುಕೆ ಮೂಲದ ಸುದ್ದಿಸಂಸ್ಥೆ ಬಿಬಿಸಿ ವಿಶ್ಲೇಷಣೆ ಮಾಡದೆ ವಸ್ತುನಿಷ್ಠವಾಗಿ ಸುದ್ದಿಯನ್ನು ಪ್ರಕಟಿಸಿದ್ದು, ನರೇಂದ್ರ ಮೋದಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಂದಾಜಿಸಿದ್ದಕ್ಕಿಂತ ಕಡಿಮೆ ಅಂತರದಲ್ಲಿ ಗೆದ್ದಿದ್ದು, ಭಾರತದಲ್ಲಿ ಪ್ರತಿಪಕ್ಷಗಳು ಮತ್ತೆ ಪುಟಿದೆದ್ದಿವೆ ಎಂದು ವರದಿ ಮಾಡಿದೆ. 

ಆಲ್‌ ಜಝೀರಾ:

ಕೊಲ್ಲಿ ರಾಷ್ಟ್ರದ ಸುದ್ದಿ ಮಾಧ್ಯಮ ಆಲ್‌ ಜಝೀರಾ ಸಂಪುಟದ ಕುರಿತು ವಿಶ್ಲೇಷಿಸುತ್ತಾ ಬಿಜೆಪಿಗೆ ಬಹುಮತ ಸಿಗದ ಕಾರಣ ತನ್ನ ನೀತಿಗಳನ್ನು ರೂಪಿಸುವಾಗ ಚಂದ್ರಬಾಬು ನಾಯ್ಡು ಹಾಗೂ ನಿತೀಶ್‌ ಕುಮಾರ್‌ ಅವರನ್ನು ಅವಲಂಬಿಸಬೇಕಿದ್ದು, ಪಕ್ಷಕ್ಕೆ ಹಗ್ಗದ ಮೇಲಿನ ನಡಿಗೆಯಾಗಲಿದೆ ಎಂದು ತಿಳಿಸಿದೆ. 

ಬ್ಲೂಂಬರ್ಗ್‌:

ಅಮೆರಿಕನ್‌ ಸುದ್ದಿಸಂಸ್ಥೆ ಬ್ಲೂಂಬರ್ಗ್‌ ಪ್ರಮಾಣವಚನ ಸಮಾರಂಭದ ವೈಭೋಗದ ಕುರಿತು ಸುದ್ದಿ ಪ್ರಕಟಿಸಿ ಅಲ್ಲಿ ಹಾಜರಿದ್ದ ತಾರೆಯರು ಹಾಗೂ ವಿದೇಶಿ ಗಣ್ಯರ ಕುರಿತು ಸುದ್ದಿ ಪ್ರಕಟಿಸಿದೆ. ಅಲ್ಲದೆ ಇದೇ ಮೊದಲ ಬಾರಿಗೆ ಮೋದಿ ತನ್ನ ಮಿತ್ರ ಪಕ್ಷಗಳೊಂದಿಗೆ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದಾಗಿ ತಿಳಿಸಿದೆ. 

ಎಎಫ್‌ಪಿ:

ಫ್ರಾನ್ಸ್‌ ಮೂಲದ ಸುದ್ದಿಸಂಸ್ಥೆ ಎಎಫ್‌ಪಿ ಫಲಿತಾಂಶ ಪ್ರಕಟವಾದ ನಂತರ ಮಿತ್ರಪಕ್ಷಗಳು ಬಹುಮತವನ್ನು ಸಾಧಿಸಿದ ಬಗೆಯನ್ನು ಸಮಗ್ರ ಸುದ್ದಿಯಾಗಿ ಪ್ರಕಟಿಸಿದ್ದು, ಪ್ರಮಾಣವಚನ ಸಮಾರಂಭದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಪ್ರಮುಖ ಪಾತ್ರ ವಹಿಸಿದ್ದರ ಕುರಿತು ವಿವರಿಸಿದೆ.ರಾಯಿಟರ್ಸ್‌:

ರಷ್ಯನ್‌ ಸುದ್ದಿಸಂಸ್ಥೆ ರಾಯಿಟರ್ಸ್‌ ಬಿಜೆಪಿಗೆ ಬಹುಮತ ಕೊರತೆಯಾಗಿರುವುದನ್ನು ಅಚ್ಚರಿ ಎಂದು ಬಣ್ಣಿಸಿದ್ದು, ಪ್ರಮಾಣವಚನ ಸಮಾರಂಭವನ್ನು ವರದಿ ಮಾಡುವ ಜೊತೆಗೆ ಭಾರತದಲ್ಲಿ ರಚನೆಯಾಗಿರುವ ಮೈತ್ರಿಕೂಟ ಎದುರಿಸಬೇಕಾದ ಸವಾಲುಗಳ ಕುರಿತು ಚರ್ಚಿಸಿದೆ.