ರಾಜ್ಯಸಭೆಯಲ್ಲಿ ಅಡ್ಡಮತದಾನ ಮಾಡಿದ್ದ ಶಾಸಕರು ಅನರ್ಹಗೊಂಡ ಹಿನ್ನೆಲೆಯಲ್ಲಿ ಅವರ ಕ್ಷೇತ್ರಗಳಿಗೂ ಉಪಚುನಾವಣೆಯನ್ನು ಘೊಷಿಸಲಾಗಿದೆ.

ಶಿಮ್ಲಾ: ಹಿಮಾಚಲ ಪ್ರದೇಶದ 6 ಅನರ್ಹ ಕಾಂಗ್ರೆಸ್‌ ಶಾಸಕರ ಕ್ಷೇತ್ರಕ್ಕೂ ಲೋಕಸಭೆ ಚುನಾವಣೆ ಜತೆಗೆ ಮತದಾನ ಘೋಷಣೆ ಆಗಿದೆ. ಜೂ.1ರಂದು ದ ಧರ್ಮಶಾಲಾ, ಸುಜಾನ್‌ಪುರ, ಲಾಹೌಲ್‌, ಸ್ಪಿಟಿ, ಬರ್ಸಾರ್, ಗಾರ್ಗೆಟ್‌ ಮತ್ತು ಕುತ್ಲೆಹಾರ್‌ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿಪ್‌ ಉಲ್ಲಂಘಿಸಿ 6 ಶಾಸಕರು ಬಿಜೆಪಿಗೆ ಮತ ಹಾಕಿದ್ದರು. ಹೀಗಾಗಿ ಈ 6 ಶಾಸಕರನ್ನು ಸ್ಪೀಕರ್‌ ಅನರ್ಹ ಮಾಡಿದ್ದರು.

ಪ್ರಸ್ತುತ ಅನರ್ಹ ಶಾಸಕರು ಹೃಷಿಕೇಶದ ತಾಜ್‌ ರೆಸಾರ್ಟ್‌ನಲ್ಲಿ ತಂಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಅನರ್ಹತೆ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಅದರ ನರುವೆಯೇ ಚುನಾವಣೆ ಘೋಷಣೆ ಆಗಿದೆ.