ಹಿಮಾಲಯ ರಕ್ಷಣೆ: ಸೋನಂ 21 ದಿನದ ಉಪವಾಸ ಅಂತ್ಯ

| Published : Mar 27 2024, 01:03 AM IST / Updated: Mar 27 2024, 08:59 AM IST

ಸಾರಾಂಶ

ಹಿಮಾಲಯದ ಜೀವವೈವಿಧ್ಯತೆ ರಕ್ಷಣೆಗೆ ಮತ್ತು ಲಡಾಖ್‌ಗೆ ರಾಜ್ಯ ಸ್ಥಾನಮಾನ ಕಲ್ಪಿಸುವಂತೆ ಕೋರಿ ಕಳೆದ 21 ದಿನಗಳಿಂದ ಉಪವಾಸ ಮಾಡುತ್ತಿದ್ದಾರೆ.

ಶ್ರೀನಗರ: ಹಿಮಾಲಯದ ಜೀವವೈವಿಧ್ಯತೆ ರಕ್ಷಣೆಗೆ ಮತ್ತು ಲಡಾಖ್‌ಗೆ ರಾಜ್ಯ ಸ್ಥಾನಮಾನ ಕಲ್ಪಿಸುವಂತೆ ಕೋರಿ ಕಳೆದ 21 ದಿನಗಳಿಂದ ಉಪವಾಸ ಮಾಡುತ್ತಿದ್ದ ಪರಿಸರ ಹೋರಾಟಗಾರ ಸೋನಂ ವಾಂಗ್ಚುಕ್‌ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದಾರೆ. ಆದಾಗ್ಯೂ ಹೋರಾಟ ಮುಂದುವರೆಸುವುದಾಗಿ ತಿಳಿಸಿದ್ದಾರೆ. ಮಾ.6ರಿಂದ ಉಪವಾಸ ಆರಂಭಿಸಿದ್ದ ಇವರ ಬೆಂಬಲಕ್ಕೆ ಇದೀಗ ಬುಡಕಟ್ಟು ಸಮುದಾಯದ ಮಹಿಳೆಯರೂ ಬಂದಿದ್ದು, ಇನ್ನು ಮುಂದೆ ಅವರೂ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಪ್ರಕಟಿಸಿದ್ದಾರೆ. ಈ ಕುರಿತು ಮಾತನಾಡಿದ ಸೋನಂ ‘ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಬಯಸುತ್ತೇವೆ’ ಎಂದು ತಿಳಿಸಿದ್ದಾರೆ. ಇವರ ಉಪವಾಸ ಸತ್ಯಾಗ್ರಹಕ್ಕೆ ನಟ ಪ್ರಕಾಶ್‌ ರಾಜ್‌ ಕೂಡ ಭೇಟಿಯಾಗಿ ಬೆಂಬಲಿಸಿದ್ದರು.