ಇನ್ನು ಕೆಲವೇ ದಿನಗಳಲ್ಲಿ 80 ವರ್ಷದವರಾಗಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದೈಹಿಕ ಆರೋಗ್ಯ ಉತ್ತಮವಾಗಿದ್ದು, ಅವರು ಸೇನಾ ಕಮಾಂಡರ್‌ನಷ್ಟು ಫಿಟ್‌ ಆಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ ಅಧ್ಯಕ್ಷ ಟ್ರಂಪ್‌ ಅವರ ಹೃದಯ ರಕ್ತನಾಳ ವ್ಯವಸ್ಥೆಯು ಅವರದ್ದಕ್ಕಿಂತ 14 ವರ್ಷ ಚಿಕ್ಕವರ ಹೃದಯದ ವ್ಯವಸ್ಥೆಯಂತೆ ಕಾಣುತ್ತಿದೆ ಎಂಬ ಅಚ್ಚರಿಯ ವಿಷಯವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ವಾಷಿಂಗ್ಟನ್‌: ಇನ್ನು ಕೆಲವೇ ದಿನಗಳಲ್ಲಿ 80 ವರ್ಷದವರಾಗಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ದೈಹಿಕ ಆರೋಗ್ಯ ಉತ್ತಮವಾಗಿದ್ದು, ಅವರು ಸೇನಾ ಕಮಾಂಡರ್‌ನಷ್ಟು ಫಿಟ್‌ ಆಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಜೊತೆಗೆ ಅಧ್ಯಕ್ಷ ಟ್ರಂಪ್‌ ಅವರ ಹೃದಯ ರಕ್ತನಾಳ ವ್ಯವಸ್ಥೆಯು ಅವರದ್ದಕ್ಕಿಂತ 14 ವರ್ಷ ಚಿಕ್ಕವರ ಹೃದಯದ ವ್ಯವಸ್ಥೆಯಂತೆ ಕಾಣುತ್ತಿದೆ ಎಂಬ ಅಚ್ಚರಿಯ ವಿಷಯವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

, ಅಧ್ಯಕ್ಷ ಸ್ಥಾನ ನಿಭಾಯಿಸಲು ಅಸಮರ್ಥ ಎಂದು ಟೀಕಿಸಿದ್ದವು

ಇತ್ತೀಚೆಗಷ್ಟೇ ವಿರೋಧ ಪಕ್ಷಗಳು ಟ್ರಂಪ್ ಅವರ ಊದಿಕೊಂಡ ಮೊಣಕಾಲು, ಸುಕ್ಕುಗಟ್ಟಿದ ಚರ್ಮ ಹಾಗೂ ಅಸ್ಥಿರವಾದ ನಡಿಗೆಯ ಫೋಟೊಗಳನ್ನು ಹಂಚಿಕೊಂಡಿದ್ದರು. ಈ ಮೂಲಕ ಟ್ರಂಪ್‌ ತೀರಾ ಮುದುಕನಾಗಿದ್ದು, ಅಧ್ಯಕ್ಷ ಸ್ಥಾನ ನಿಭಾಯಿಸಲು ಅಸಮರ್ಥ ಎಂದು ಟೀಕಿಸಿದ್ದವು. ಅದರ ಬೆನ್ನಲ್ಲೇ ಹೊರಬಂದಿರುವ ಈ ವೈದ್ಯಕೀಯ ವರದಿ ವಿಪಕ್ಷಗಳಿಗೆ ತಿರುಗೇಟು ನೀಡಿದೆ.

ಹಲವು ಪರೀಕ್ಷೆ

22 ತಜ್ಞರು ಟ್ರಂಪ್‌ ಅವರನ್ನು ಸಿಟಿ ಸ್ಕ್ಯಾನ್‌, ಕ್ಯಾನ್ಸರ್‌ ಪತ್ತೆ ಪರೀಕ್ಷೆ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಿ, ‘ಆರೋಗ್ಯ ಉತ್ತಮವಾಗಿದೆ’ ಎಂದು ದೃಢಪಡಿಸಿದ್ದಾರೆ. ಜತೆಗೆ, ತೂಕ ಇಳಿಕೆಗೆ ಆಹಾರಕ್ರಮ, ದೈಹಿಕ ಚಟುವಟಿಕೆಗಳನ್ನು ಸೂಚಿಸಿದ್ದಾರೆ. ಕಳೆದ ವರ್ಷ 102 ಕೆ.ಜಿ. ಇದ್ದ ಟ್ರಂಪ್‌ ಈಗ 108 ಕೆ.ಜಿ. ತೂಗುತ್ತಿದ್ದಾರೆ ಎಂದೂ ತಿಳಿದುಬಂದಿದೆ.