ಸಾರಾಂಶ
ತೆಲುಗು ನಟ ನಾಗಚೈತನ್ಯ ಮತ್ತು ಸಮಂತಾ ಮದುವೆ ಮುರಿದು ಬೀಳಲು ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ಪುತ್ರ ಕೆ.ಟಿ.ರಾಮರಾವ್ ಕಾರಣ ಎಂದು ಹಾಲಿ ಅರಣ್ಯ ಸಚಿವೆ ಕೊಂಡಾ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹೈದರಾಬಾದ್: ತೆಲುಗು ನಟ ನಾಗಚೈತನ್ಯ ಮತ್ತು ಸಮಂತಾ ಮದುವೆ ಮುರಿದು ಬೀಳಲು ತೆಲಂಗಾಣದ ಮಾಜಿ ಸಿಎಂ ಕೆ. ಚಂದ್ರಶೇಖರ್ ಪುತ್ರ ಕೆ.ಟಿ.ರಾಮರಾವ್ ಕಾರಣ ಎಂದು ಹಾಲಿ ಅರಣ್ಯ ಸಚಿವೆ ಕೊಂಡಾ ಸುರೇಖಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿದ ಸುರೇಖಾ, ‘ಅನೇಕ ನಟಿಯರು ಬೇಗ ಮದುವೆಯಾಗಲು ಮತ್ತು ಅವರ ವೈವಾಹಿಕ ಜೀವನ ಮುರಿದು ಬೀಳಲು ಕೆ.ಟಿ.ರಾಮರಾವ್ ಕಾರಣ. ಅವರು ನಟಿಯರಿಗೆ ಡ್ರಗ್ಸ್ ನೀಡಿ, ಅದಕ್ಕೆ ಅವರು ವ್ಯಸನಿಗಳಾಗುವಂತೆ ಮಾಡುತ್ತಾರೆ. ಬಳಿಕ ಅವರು ನಟಿಯರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ’ ಎಂದು ಹೇಳಿದ್ದಾರೆ.
ಈ ಬಗ್ಗೆ ನಾಗಚೈತನ್ಯ ತಂದೆ ನಟ ನಾಗರ್ಜುನ ಪ್ರತಿಕ್ರಿಯಿಸಿದ್ದು,‘ಇದು ಸಂಪೂರ್ಣ ಸುಳ್ಳು. ರಾಜಕೀಯದಿಂದ ದೂರವಿರುವ ಕಲಾವಿದರನ್ನು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಿಕೊಳ್ಳಬೇಡಿ. ಬೇರೆಯವರ ವೈಯುಕ್ತಿಕ ಬದುಕನ್ನು ಗೌರವಿಸಿ’ ಎಂದಿದ್ದಾರೆ.