ಹೈದರಾಬಾದ್‌ ವಿಮೋಚನಾ ದಿನದ ಮೂಲಕ ಸ್ವಾತಂತ್ರ್ಯವೀರರಿಗೆ ಗೌರವ: ಅಮಿತ್‌ ಶಾ

| Published : Mar 14 2024, 02:03 AM IST

ಹೈದರಾಬಾದ್‌ ವಿಮೋಚನಾ ದಿನದ ಮೂಲಕ ಸ್ವಾತಂತ್ರ್ಯವೀರರಿಗೆ ಗೌರವ: ಅಮಿತ್‌ ಶಾ
Share this Article
  • FB
  • TW
  • Linkdin
  • Email

ಸಾರಾಂಶ

ಹೈದರಾಬಾದ್‌ ವಿಮೋಚನಾ ದಿನ ಎಂದು ಕೇಂದ್ರ ಸರ್ಕಾರ ಸೆ.17ರಂದು ಘೋಷಣೆ ಮಾಡುವ ಮೂಲಕ ಸ್ವಾತಂತ್ರ್ಯ ಯೋಧರಿಗೆ ಗೌರವ ಸಲ್ಲಿಸಿದೆ ಎಂದು ಕೇಮದ್ರ ಗೃಹ ಸಚಿವ ಅಮಿತ್‌ ಶಾ ತಿಳಿಸಿದ್ದಾರೆ.

ಹೈದರಾಬಾದ್‌: ಹೈದರಾಬಾದ್‌ ವಿಮೋಚನಾ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷವು ಸೆಪ್ಟೆಂಬರ್‌ 17ರಂದು ಕೇಂದ್ರ ಸರ್ಕಾರದ ವತಿಯಿಂದ ‘ಹೈದರಾಬಾದ್‌ ವಿಮೋಚನಾ ದಿನ’ವನ್ನಾಗಿ ಆಚರಿಸಲಾಗುವುದು ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಸೆ.17ರಂದು ಹೈದರಾಬಾದ್‌ ವಿಮೋಚನಾ ದಿನ ಎಂಬುದಾಗಿ ಆಚರಿಸಲು ಹೈದರಾಬಾದ್‌ ಪ್ರಾಂತ್ಯದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಆದ್ದರಿಂದ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿತ್ತು.

ಭಾರತ ಸ್ವತಂತ್ರ ದೇಶವಾಗಿ 13 ತಿಂಗಳಾದರೂ ನಿಜಾಮರ ಆಳ್ವಿಕೆಗೆ ಒಳಪಟ್ಟ ಹೈದರಾಬಾದ್‌ ಪ್ರಾಂತ್ಯಕ್ಕೆ ಸ್ವಾತಂತ್ರ್ಯ ಸಿಕ್ಕಿರಲಿಲ್ಲ. ಆದ್ದರಿಂದ 1948ರ ಸೆ.17ರಂದು ‘ಆಪರೇಷನ್‌ ಪೋಲೊ’ ಎಂಬ ಪೊಲೀಸ್‌ ಕಾರ್ಯಾಚರಣೆಯಲ್ಲಿ ಹೈದರಾಬಾದ್‌ಗೆ ವಿಮೋಚನೆ ದೊರೆಕಿತು.

ಕರ್ನಾಟಕದ ಬೀದರ್‌, ಕಲಬುರಗಿ, ರಾಯಚೂರು, ಬಳ್ಳಾರಿ, ಈಗಿನ ಯಾದಗಿರಿ ಹಾಗೂ ಕೊಪ್ಪಳದ ಹಲವು ಪ್ರಾಂತ್ಯಗಳು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದವು. ಆದ್ದರಿಂದ ಈ ಜಿಲ್ಲೆಗಳನ್ನು ಹೈದರಾಬಾದ್‌-ಕರ್ನಾಟಕ ಜಿಲ್ಲೆಗಳು ಎಂದು ಕರೆಯಲಾಗುತ್ತದೆ.