ಸಾರಾಂಶ
‘ಜುಲೈ 30ರ ಬೆಳಿಗ್ಗೆ ಕೇರಳಕ್ಕೆ ರೆಡ್ ಅಲರ್ಟ್ ನೀಡಿದ್ದೆವು’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಖ್ಯಸ್ಥ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ.
ನವದೆಹಲಿ: ‘ಜು. 23ರಂದೇ ವಯನಾಡಿಗೆ ಸಂಭವನೀಯ ಪ್ರಾಕೃತಿಕ ವಿಪತ್ತಿನ ಬಗ್ಗೆ ಮುನ್ಸೂಚನೆ ನೀಡಿದ್ದೆವು. ಆದರೆ ಕೇರಳ ಎಚ್ಚೆತ್ತುಕೊಂಡಿರಲಿಲ್ಲ’ ಎಂದು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ ಬೆನ್ನಲ್ಲೇ, ‘ಜುಲೈ 30ರ ಬೆಳಿಗ್ಗೆ ಕೇರಳಕ್ಕೆ ರೆಡ್ ಅಲರ್ಟ್ ನೀಡಿದ್ದೆವು’ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಮುಖ್ಯಸ್ಥ ಮೃತ್ಯುಂಜಯ ಮೊಹಪಾತ್ರ ಹೇಳಿದ್ದಾರೆ.
‘20 ಸೆಂ.ಮೀ ತನಕ ಭಾರೀ ಮಳೆಯಾಗಬಹುದು ಎನ್ನುವ ಸೂಚನೆಯೊಂದಿಗೆ ಜು.30ರ ಬೆಳಿಗ್ಗೆ ರೆಡ್ ಅಲರ್ಟ್ ನೀಡಿದ್ದೆವು. ಆರೆಂಜ್ ಅಲರ್ಟ್ ಎಂದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲು ಸಿದ್ಧರಾಗಿರಿ ಎಂದರ್ಥ.
ರೆಡ್ ಅಲರ್ಟ್ ಬರುವ ತನಕ ಕಾಯಬಾರದು’ ಎಂದಿದ್ದಾರೆ. ಆದರೆ ಕೇರಳ ಸಿಎಂ ಪಿಣರಾಯಿ ವಿಜಯನ್ ಈ ವಿಚಾರವನ್ನು ಅಲ್ಲಗಳೆದಿದ್ದು, ‘ಐಎಂಡಿ ಆರೆಂಜ್ ಅಲರ್ಟ್ ಮಾತ್ರವೇ ಘೋಷಿಸಿತ್ತು’ ಎಂದಿದ್ದರು.