ಸಾರಾಂಶ
2024ನೇ ವರ್ಷದಲ್ಲಿ ಆರ್ಥಿಕ ಪ್ರಗತಿಯನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿದ್ದು, ಭಾರತದ ಆರ್ಥಿಕ ಪ್ರಗತಿ ದರ ಉತ್ತಮ ಎನ್ನಬಹುದಾದ ಶೇ.6.7ರಷ್ಟು ಇರಲಿದೆ
ನವದೆಹಲಿ: 2024ನೇ ವರ್ಷದಲ್ಲಿ ಆರ್ಥಿಕ ಪ್ರಗತಿಯನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಅಂದಾಜಿಸಿದ್ದು, ಭಾರತದ ಆರ್ಥಿಕ ಪ್ರಗತಿ ದರ ಉತ್ತಮ ಎನ್ನಬಹುದಾದ ಶೇ.6.7ರಷ್ಟು ಇರಲಿದೆ ಎಂದು ಹೇಳಿದೆ.
ಇತರ ಎಲ್ಲಾ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಪ್ರಗತಿ ಪ್ರಕಾಶಿಸುತ್ತಿದೆ. ಅಕ್ಟೋಬರ್‌ನಲ್ಲಿ ಶೇ.6.5ರ ಪ್ರಗತಿ ಅಂದಾಜಿಸಲಾಗಿತ್ತು. ಅದು ಈಗ ಶೇ.0.2ರಷ್ಟು ಹೆಚ್ಚಿದ್ದು, ಶೇ.6.7ರದ ದರದಲ್ಲಿ ಪ್ರಗತಿ ಕಾಣಬಹುದು.
ಇದೇ ವೇಳೆ, ಜಾಗತಿಕ ಆರ್ಥಿಕ ಪ್ರಗತಿ ದರ ಸಹ ಶೇ.3.1ರಷ್ಟು ಇರಲಿದೆ ಎಂದು ಐಎಂಎಫ್ ಹೇಳಿದೆ. ಪ್ರಸ್ತುತ ಹಣದುಬ್ಬರ ಪ್ರಮಾಣ ಕಡಿಮೆ ಇರುವುದರಿಂದ ಆರ್ಥಿಕ ಪ್ರಗತಿ ದರ ಅಧಿಕವಾಗಿದೆ.
ಅಮೆರಿಕ, ರಷ್ಯಾ, ಚೀನಾ ಮತ್ತು ಯುರೋಪಿಯನ್ ದೇಶಗಳಲ್ಲೂ ಸಹ ಆರ್ಥಿಕ ಪ್ರಗತಿಯಾಗಲಿದೆ ಎಂದು ಹೇಳಿದೆ.