ಸಾರಾಂಶ
ವಾಷಿಂಗ್ಟನ್: ತಾಂತ್ರಿಕವಾಗಿ ಮಾನವ ನಿರ್ವಹಿಸಬಲ್ಲ ಬಹುತೇಕ ಎಲ್ಲ ಕೆಲಸವನ್ನೂ ಮಾಡುವ ಸಾಮರ್ಥ್ಯವಿರುವ ಎಐ (ಕೃತಕ ಬುದ್ಧಿಮತ್ತೆ) ಪ್ರಪಂಚದ ಶೇ.50ರಷ್ಟು ಉದ್ಯೋಗಗಳ ಮೇಲೆ ತನ್ನ ಪ್ರಭಾವ ಬೀರಲಿದೆ.
ಅಂದರೆ ಈಗಿರುವ ಶೇ.50ರಷ್ಟು ಕೆಲಸಗಳನ್ನು ಮಾಡುವ ಸಾಮರ್ಥ್ಯ ಹೊಂದಿರುವ ಎಐ ಈ ಪೈಕಿ ಎಷ್ಟೋ ಕೆಲಸಗಳನ್ನು ಪೂರ್ತಿಯಾಗಿ ಮನುಷ್ಯರಿಂದ ಕಸಿದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಉಳಿದ ಕೆಲಸಗಳ ಮೇಲೂ ಎಐ ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಮ್‌ಎಫ್) ವರದಿ ತಿಳಿಸಿದೆ.
ಅಧ್ಯಯನ ವರದಿಯನ್ನುದ್ದೇಶಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಐಎಮ್‌ಎಫ್ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾಯೀ ಮಾಹಿತಿ ತಿಳಿಸಿದ್ದಾರೆ.
ಅಲ್ಲದೇ ಎಐ ಕೆಲವೆಡೆ ಪೂರಕವಾಗಿದ್ದರೆ, ಇನ್ನು ಕೆಲವರಿಗೆ ಅದು ಮಾರಕವಾಗಿ ಪರಿಗಣಿಸುವ ಸಾಧ್ಯತೆಯೂ ಇದೆ. ಜಗತ್ತಿನಲ್ಲಿ ಎಐ ಪರಿಣಾಮವನ್ನು ಆದಷ್ಟು ನಿಯಂತ್ರಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಎಐ ಪ್ರಭಾವ ಮತ್ತು ಬಳಕೆ ಹೆಚ್ಚಾದಂತೆ ಅಮೆರಿಕ ಹಾಗೂ ಯೂರೋಪ್‌ನಂತಹ ಮುಂದುವರೆದ ರಾಷ್ಟ್ರಗಳು ಉದಯೋನ್ಮುಖ ಮಾರುಕಟ್ಟೆ ಅಥವಾ ಕಡಿಮೆ ಆದಾಯದ ದೇಶಗಳಿಗೆ ಹೋಲಿಸಿದರೆ ಹೆಚ್ಚು ಅಡಚಣೆ ಅಥವಾ ತೊಂದರೆ ಎದುರಿಸುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.