ಅಮೆರಿಕ ಅಧ್ಯಕ್ಷೀಯ ಚುನಾವಣೆ : ಟ್ರಂಪ್‌ ಗೆದ್ದರೆ ಭಾರತ, ಇತರ ದೇಶಗಳ ವಲಸಿಗರಿಗೆ ಆಪತ್ತು?

| Published : Oct 28 2024, 01:18 AM IST / Updated: Oct 28 2024, 04:23 AM IST

Donald Trump

ಸಾರಾಂಶ

ಇನ್ನು 8 ದಿನ ಬಳಿಕ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಕಡಿವಾಣ ಹಾಕುವುದಾಗಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಹೇಳುತ್ತಿದ್ದಾರೆ ಹಾಗೂ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವದ ಹಕ್ಕನ್ನು ಮೊಟಕುಗೊಳಿಸುವುದಾಗಿ ಹೇಳಿದ್ದಾರೆ.

 ಅಟ್ಲಾಂಟಾ : ಇನ್ನು 8 ದಿನ ಬಳಿಕ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ವಲಸಿಗರಿಗೆ ಕಡಿವಾಣ ಹಾಕುವುದಾಗಿ ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್ ಹೇಳುತ್ತಿದ್ದಾರೆ ಹಾಗೂ ಅಕ್ರಮ ವಲಸಿಗರ ಮಕ್ಕಳ ಜನ್ಮಸಿದ್ಧ ಪೌರತ್ವದ ಹಕ್ಕನ್ನು ಮೊಟಕುಗೊಳಿಸುವುದಾಗಿ ಹೇಳಿದ್ದಾರೆ. ಇದು ಭಾರತ ಹಾಗೂ ಇತರ ದೇಶಗಳಿಂದ ಅಮೆರಿಕಕ್ಕೆ ವಲಸೆ ಬಂದವರಿಗೆ ನಡುಕ ಮೂಡಿಸುತ್ತಿದೆ.ಟ್ರಂಪ್‌ ಗೆದ್ದರೆ ಈ ಕ್ರಮಗಳನ್ನು ಅವರು ಜಾರಿಗೊಳಿಸಬಹುದು. ಇದರಿಂದ ತಮಗೆ ತೊಂದರೆ ಆಗಬಹುದು ಎಂಬುದು ಅವರ ಆತಂಕಕ್ಕೆ ಕಾರಣ.

ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ವಲಸಿಗರಿದ್ದು, ಅವರನ್ನು ಗಡೀಪಾರು ಮಾಡಲಾಗುವುದು. ಅಕ್ರಮ ವಲಸಿಗರ ಮಕ್ಕಳು ಅಮೆರಿಕದಲ್ಲಿ ಜನಿಸಿದ್ದರೂ ಅವರಿಗೆ ಅಮೆರಿಕ ಪೌರತ್ವ ನೀವುದಿಲ್ಲ ಎಂಬುದು ಟ್ರಂಪ್‌ ನಿಲುವು. ಇದು ಆತಂಕದ ಜತೆಗೆ ಆಕ್ಷೇಪಕ್ಕೂ ಕಾರಣವಾಗಿದೆ.

ಅಮೆರಿಕದಲ್ಲಿ ಯಾರೇ ಜನಸಿದರೂ ಅವರಿಗೆ ಜನ್ಮಸಿದ್ಧ ಪೌರತ್ವ ದೊರಕುತ್ತದೆ. ಆದರೆ ಅಂಥದ್ದರಲ್ಲಿ ಅಕ್ರಮ ವಲಸಿಗರ ಮಕ್ಕಳು ಅಮೆರಿಕದಲ್ಲಿ ಜನಿಸಿದ್ದರೂ ಅವರಿಗೆ ಪೌರತ್ವ ನಿರಾಕರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಟ್ರಂಪ್‌ ನಡೆ ಬಗ್ಗೆ ಕೆಲವು ಕಾನೂನು ತಜ್ಞರು ಕಿಡಿಕಾರಿದ್ದಾರೆ.

‘ಟ್ರಂಪ್ ನಡೆಗಳಿಂದ ನಾವು ಚಿಂಚಿತರಾಗಿದ್ದೇವೆ. ಆದರೆ ಅವರ ವಿರೋಧಿ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಕೂಡ ಅಕ್ರಮ ವಲಸೆಗೆ ವಿರೋಧ ಇದ್ದರೂ ಟ್ರಂಪ್‌ರಷ್ಟು ಕಠಿಣ ನಿಲುವು ಹೊಂದಿಲ್ಲ. ಹೀಗಾಗಿ ಬಹುತೇಕ ವಲಸಿಗರು ಕಮಲಾ ಪರವಾಗಿದ್ದಾರೆ’ ಎಂದು ಭಾರತ ಹಾಗೂ ಬಾಂಗ್ಲಾ ವಲಸಿಗರು ಹೇಳಿದ್ದಾರೆ.