ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಗತಿ ಕುರಿತು ಸಾಕಷ್ಟು ಪುಕಾರುಗಳು ಹರಿದಾಡುತ್ತಿರುವ ನಡುವೆಯೇ ಅವರು ಜೀವಂತವಾಗಿದ್ದಾರೆ ಎಂದು ದೃಢಪಟ್ಟಿದೆ. ಖುದ್ದು ಇಮ್ರಾನ್‌ರನ್ನು ಜೈಲಲ್ಲಿ ಭೇಟಿಯಾದ ಸಹೋದರಿ ಉಜ್ಮಾ ಖಾನಂ ಈ ಘೋಷಣೆ ಮಾಡಿದ್ದಾರೆ.
ಇಮ್ರಾನ್ ಸಾವಿನ ಪುಕಾರು ಹರಿದಾಡುತ್ತಿರುವ ಹಿನ್ನೆಲೆ
ಸೋದರಿ ಖಾನಂ ಭೇಟಿಗೆ ಸರ್ಕಾರದಿಂದ ಅವಕಾಶಸೋದರ ಜೀವಂತ, ಆದರೆ ಚಿತ್ರಹಿಂಸೆ: ಖಾನಂ ಅಳಲುಇಸ್ಲಾಮಾಬಾದ್: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಗ್ಯ ಸ್ಥಿತಿಗತಿ ಕುರಿತು ಸಾಕಷ್ಟು ಪುಕಾರುಗಳು ಹರಿದಾಡುತ್ತಿರುವ ನಡುವೆಯೇ ಅವರು ಜೀವಂತವಾಗಿದ್ದಾರೆ ಎಂದು ದೃಢಪಟ್ಟಿದೆ. ಖುದ್ದು ಇಮ್ರಾನ್‌ರನ್ನು ಜೈಲಲ್ಲಿ ಭೇಟಿಯಾದ ಸಹೋದರಿ ಉಜ್ಮಾ ಖಾನಂ ಈ ಘೋಷಣೆ ಮಾಡಿದ್ದಾರೆ.
ಸಹೋದರಿ ಉಜ್ಮಾ ಖಾನಂಗೆ ಸಹೋದರನ ಭೇಟಿಗೆ ಪಾಕ್ ಸರ್ಕಾರ ಮಂಗಳವಾರ ಸಂಜೆ ಅವಕಾಶ ಕಲ್ಪಿಸಿತ್ತು. ಹಿನ್ನೆಲೆಯಲ್ಲಿ ಇಮ್ರಾನ್ ಭೇಟಿಯಾದ ಸೋದರಿ, ‘ನನ್ನ ತಮ್ಮ ಜೀವಂತವಾಗಿದ್ದಾನೆ’ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಖಾನಂ, ‘ ಇಮ್ರಾನ್ ಖಾನ್ ಅವರ ಆರೋಗ್ಯ ಸಂಪೂರ್ಣವಾಗಿ ಉತ್ತಮವಾಗಿದೆ. ಆದಾಗ್ಯೂ, ಅವರು ಅವರನ್ನು ಮಾನಸಿಕ ಹಿಂಸೆಗೆ ಒಳಪಡಿಸಲಾಗುತ್ತಿದೆ. ಇದೆಲ್ಲದಕ್ಕೂ ಸೇನಾ ಮುಖ್ಯಸ್ಥ ಆಸೀಂ ಮುನೀರ್ ಕಾರಣ’ ಎಂದು ಆರೋಪಿಸಿದರು.
ಎರಡು ದಿನಗಳ ಹಿಂದಷ್ಟೇ ಇಮ್ರಾನ್ ಖಾನ್ ಮೃತಪಟ್ಟಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ತೀವ್ರ ಆತಂಕ ಸೃಷ್ಟಿಸಿತ್ತು. ಈ ನಡುವೆ, ಇಮ್ರಾನ್ ಖಾನ್ ಪರ ಪಾಕಿಸ್ತಾನ್ ತೆಗ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷವು ದೇಶಾದ್ಯಂತ ಭಾರೀ ಪ್ರತಿಭಟನೆ ಕೈಗೊಳ್ಳುವ ಬೆದರಿಕೆಯನ್ನೂ ಹಾಕಿತ್ತು. ಇದರ ಬೆನ್ನಲ್ಲೇ ಸದ್ಯ ಅಡಿಯಾಲ ಜೈಲಲ್ಲಿರುವ ಇಮ್ರಾನ್ ಖಾನ್ ಭೇಟಿಯಾಗಲು ಸಹೋದರಿಗೆ ಅವಕಾಶ ಕಲ್ಪಿಸಲಾಗಿದೆ. ಖಾನಂ ಮತ್ತು ಒಬ್ಬ ವಕೀಲರಿಗೆ ಇಮ್ರಾನ್ ಖಾನ್ ಅವರನ್ನು ಜೈಲಲ್ಲಿ ಭೇಟಿ ಮಾಡಲು ಅವಕಾಶ ಸಿಕ್ಕಿದೆ.