ತಾಹ ಶತಕದಬ್ಬರಕ್ಕೆ ನಲುಗಿದ ಲಯನ್ಸ್‌

| Published : Aug 13 2025, 12:30 AM IST

ಸಾರಾಂಶ

ಮೊಹಮದ್‌ ತಾಹ ಅವರ ಸ್ಫೋಟಕ ಶತಕದ ನೆರವಿನಿಂದ ಶಿವಮೊಗ್ಗ ಲಯನ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ 29 ರನ್‌ ಗೆಲುವು ಸಾಧಿಸಿ, 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿತು.

- ಮಹಾರಾಜ ಟ್ರೋಫಿ: ಶಿವಮೊಗ್ಗ ವಿರುದ್ಧ ಹುಬ್ಬಳ್ಳಿಗೆ 29 ರನ್‌ ಜಯ । ತಾಹ 53 ಬಾಲಲ್ಲಿ 101 ರನ್‌ಮೈಸೂರು: ಮೊಹಮದ್‌ ತಾಹ ಅವರ ಸ್ಫೋಟಕ ಶತಕದ ನೆರವಿನಿಂದ ಶಿವಮೊಗ್ಗ ಲಯನ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ 29 ರನ್‌ ಗೆಲುವು ಸಾಧಿಸಿ, 4ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಶುಭಾರಂಭ ಮಾಡಿತು.

53 ಎಸೆತದಲ್ಲಿ 10 ಬೌಂಡರಿ, 6 ಸಿಕ್ಸರ್‌ಗಳೊಂದಿಗೆ 101 ರನ್‌ ಸಿಡಿಸಿದ ತಾಹ, 4ನೇ ಆವೃತ್ತಿಯಲ್ಲಿ ಮೊದಲ ಶತಕ ದಾಖಲಿಸಿದ ಆಟಗಾರ ಎನಿಸಿದರು.

20 ಓವರಲ್ಲಿ 4 ವಿಕೆಟ್‌ ನಷ್ಟಕ್ಕೆ 216 ರನ್‌ ಗಳಿಸಿದ ಹುಬ್ಬಳ್ಳಿ, ಶಿವಮೊಗ್ಗ ತಂಡವನ್ನು 187 ರನ್‌ಗೆ ನಿಯಂತ್ರಿಸಿತು. ಅನಿರುದ್ಧ ಜೋಶಿ ಅವರ ಸ್ಫೋಟಕ ಆಟ ಶಿವಮೊಗ್ಗಕ್ಕೆ ಗೆಲುವು ತಂದುಕೊಡಲಿಲ್ಲ.

ನಾಯಕ ದೇವದತ್‌ ಪಡಿಕ್ಕಲ್‌ (52) ಜೊತೆ 2ನೇ ವಿಕೆಟ್‌ಗೆ 100 ರನ್‌ ಸೇರಿಸಿದ ತಾಹ, ಎಡಗೈ ಸ್ಪಿನ್ನರ್‌ ಹಾರ್ದಿಕ್‌ರ ರಾಜ್‌ರ ಒಂದೇ ಓವರಲ್ಲಿ 24 ರನ್‌ ಸಿಡಿಸಿ, ಶತಕದತ್ತ ಮುನ್ನುಗ್ಗಿದರು.

ಶಿವಮೊಗ್ಗ 13.4 ಓವರಲ್ಲಿ 103 ರನ್‌ಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಅನಿರುದ್ಧ ಜೋಶಿ 42 ಎಸೆತದಲ್ಲಿ 3 ಬೌಂಡರಿ, 9 ಸಿಕ್ಸರ್‌ಗಳೊಂದಿಗೆ 79 ರನ್‌ ಚಚ್ಚಿ ಸೋಲಿನ ಅಂತರವನ್ನು ತಗ್ಗಿಸಿದರು.ಸ್ಕೋರ್‌: ಹುಬ್ಬಳ್ಳಿ 20 ಓವರಲ್ಲಿ 216/4 (ತಾಹ 101, ಪಡಿಕ್ಕಲ್‌ 52, ವಿದ್ವತ್‌ 2-39), ಶಿವಮೊಗ್ಗ 20 ಓವರಲ್ಲಿ 187/6 (ಜೋಶಿ 79*, ಅನೀಶ್ವರ್‌ 32, ಕಾರ್ಯಪ್ಪ 2-28)